Home ನಂಬಿಕೆ ಸುತ್ತಮುತ್ತ ನವರಾತ್ರಿ ಒಂಬತ್ತನೆ ದಿನ; ದೇವಿಯ ಸಿದ್ಧಿದಾತ್ರಿ ರೂಪ ಆರಾಧನೆ

ನವರಾತ್ರಿ ಒಂಬತ್ತನೆ ದಿನ; ದೇವಿಯ ಸಿದ್ಧಿದಾತ್ರಿ ರೂಪ ಆರಾಧನೆ

823
0
SHARE

ನವರಾತ್ರಿಯ ಕೊನೆಯ ದಿನ ಅಂದರೆ ಒಂಬತ್ತನೆಯ ದಿನ ದೇವಿಯ ಸಿದ್ಧಿದಾತ್ರಿ ರೂಪವನ್ನು ಆರಾಧಿಸಲಾಗುವುದು. ಅಷ್ಟಸಿದ್ಧಿಯನ್ನು ನೀಡುವವಳೇ ಸಿದ್ಧಿದಾತ್ರಿ. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ಮತ್ತು ವಶಿತ್ವ ಇವೇ ಅಷ್ಟಸಿದ್ಧಿಗಳು. ಅಂದರೆ ಕ್ರಮವಾಗಿ ಸೂಕ್ಷ್ಮರೂಪವನ್ನು ಧರಿಸುವ ಶಕ್ತಿ, ದೊಡ್ಡ ಆಕಾರವನ್ನು ಹೊಂದುವ ಶಕ್ತಿ, ಭಾರವಾಗುವ ಶಕ್ತಿ, ಹಗುರಾಗುವ ಶಕ್ತಿ, ಅಸಾಧ್ಯವಾದುದನ್ನು ಪಡೆಯುವುದು, ಬಯಸಿದ್ದನ್ನು ಗಳಿಸುವುದು, ಪ್ರಭಾವ ಬೀರುವುದು ಮತ್ತು ಇಂದ್ರಿಯಗಳನ್ನು ನಿಗ್ರಹಿಸುವುದು ಇವು ಅಷ್ಟಸಿದ್ಧಿಯ ಅರ್ಥ. ಈ ಅಷ್ಟಸಿದ್ಧಿಯನ್ನು ಹೊಂದಿದವನು ಭಾಗ್ಯಶಾಲಿಯೇ ಸರಿ. ಅವನು ದೇವರಿಗೆ ಹತ್ತಿರವಾಗುತ್ತಾನೆ.

ಸಿದ್ಧಿದಾತ್ರಿಯನ್ನು ಪೂಜಿಸುವುದರಿಂದ ಈ ಅಷ್ಟಸಿದ್ಧಿ ಪ್ರಾಪ್ತಿಯಾಗುತ್ತದೆ. ಸಿದ್ಧಿ ಎಂದರೆ ಜಯ, ಯಶಸ್ಸು, ಸಫಲತೆ, ಗೆಲವು ಮೊದಲಾದ ಅರ್ಥವಿದೆ. ಜೀವನದಲ್ಲಿ ಸದಾ ಯಶಸ್ಸನ್ನು ನೀಡುವ ದೇವಿಯೇ ಸಿದ್ಧಿದಾತ್ರಿ. ಈಕೆ ಶಿವನಿಗೂ ಅಷ್ಟಸಿದ್ಧಿಗಳನ್ನು ನೀಡಿದವಳು. ಹಾಗಾಗಿ ಇವಳನ್ನು ಅರ್ಧನಾರೀಶ್ವರೀ ಎಂದೂ ಕರೆಯುತ್ತಾರೆ. ದೇವಿಯು ತಾಯಿಯಾಗಿ, ಮಮತಾಮಯಿಯಾಗಿ, ಗುರುವಾಗಿ, ಪೋಷಕಿಯಾಗಿ, ಶಕ್ತಿಯಾಗಿ ಮಾನವನ ಜೊತೆಗಿರುತ್ತಾಳೆ. ಕಮಲದ ಮೇಲೆ ಕುಳಿತ ಇವಳು, ಚತುರ್ಭುಜೆಯಾಗಿ ಕಾಣಿಸಿಕೊಂಡಿದ್ದಾಳೆ. ಅಭಯ ಹಸ್ತದೊಂದಿಗೆ, ಉಳಿದ ಮೂರು ಕೈಗಳಲ್ಲಿ ಶಂಖ, ಚಕ್ರ ಮತ್ತು ಕಮಲ ಪುಷ್ಪವನ್ನು ಹಿಡಿಕೊಂಡಿದ್ದಾಳೆ. ಸುಲಕ್ಷಣ, ಸೌಮ್ಯವದನೆಯಾದ ಈಕೆ ಭಕ್ತರ ಎಲ್ಲಾ ಕಾರ್ಯಗಳಲ್ಲೂ ಸಿದ್ಧಿ ಅಂದರೆ ಜಯ ದೊರೆಯುವಂತೆ ಕರುಣಿಸುತ್ತಾಳೆ.

ಸಿದ್ಧಿದಾತ್ರಿಯ ರೂಪವು ನಾವು ಜೀವನದಲ್ಲಿ ಪಾಲಿಸಬೇಕಾದ ಅಂಶಗಳನ್ನು ಬಿಂಬಿಸುತ್ತದೆ. ಅಷ್ಟಸಿದ್ಧಿಯಲ್ಲಿ ಹೇಳಿರುವಂತೆ ಸೂಕ್ಷ್ಮರೂಪವನ್ನು ಅಂದರೆ ಬದುಕಿನ ಸೂಕ್ಷ್ಮವಾದ ಸಂಗತಿಗಳನ್ನು ಅರಿತುಕೊಂಡು ಮುಂದಿನ ಹೆಜ್ಜೆಯಿಡಬೇಕಾಗುತ್ತದೆ. ದೊಡ್ಡ ಆಕಾರ ಹೊಂದುವುದು ಎಂದರೆ ಬಲಾಢ್ಯವಾದ ಶರೀರ ಪಡೆಯುವುದು ಎಂದಲ್ಲ. ಇಲ್ಲಿ ವಿಶಾಲವಾದ ಮನಸ್ಸನ್ನು ಹೊಂದುವುದು ಎಂದರ್ಥ. ಭಾರವಾಗುವ ಶಕ್ತಿ ಎಂದರೆ ನಮ್ಮೊಳಗಿನ ಗಟ್ಟಿತನ, ಏಕಾಗ್ರತೆ ಮತ್ತು ಚಿತ್ತಶಾಂತಿಯನ್ನು ನಾವು ಹೊಂದಬೇಕು ಎಂದರ್ಥ.

ಹಗುರವಾಗು ಎಂದರೆ ಆಭಾರಿಯಾಗು ಎಂಬುದಿಲ್ಲಿ ಮತಿತಾರ್ಥ. ಯಾರಿಗೂ ಭಾರವಾಗಬೇಡ, ಅಂದರೆ ತೊಂದರೆಯನ್ನು ಕೊಡಬೇಡ ಎಂತಲೂ ಇದನ್ನು ಅರ್ಥೈಸಿಕೊಳ್ಳಬೇಕು. ಅಸಾಧ್ಯವಾದುದನ್ನು ಪಡೆಯುವುದು ಅಂದರೆ ಜೀವನದಲ್ಲಿ ಯಶಸ್ಸನ್ನು ಗಳಿಸುವುದು. ಅಂತಹ ಶಕ್ತಿ ನಮಗೆ ಬೇಕೆಂದಾದರೆ ನಾವು ಸದಾಚಾರದ ಹಾದಿಯಲ್ಲಿಯೇ ನಡೆಯಬೇಕು. ಆಗ ನಮಗೆ ಖಂಡಿತವಾಗಿಯೂ ಅಸಾಧ್ಯವೆಂದುಕೊಂಡದ್ದು ಸುಲಭವಾಗಿ ಸಿಗುತ್ತದೆ. ಮನುಷ್ಯನು ತನಗಿಷ್ಟವಾದುದನ್ನು ಪಡೆಯಲು ಸದಾ ಪ್ರಯತ್ನದಲ್ಲಿರುತ್ತಾನೆ. ಆದರೆ ನಮಗೆ ಬೇಕಾದುದನ್ನು ಹೊಂದುವಾಗ ಇತರರನ್ನು ನೋಯಿಸಬಾರದು. ನಮ್ಮ ಗಳಿಕೆ ಇನ್ನೊಬ್ಬರಿಗೆ ಉಪಕಾರಿಯಾಗಿರಬೇಕು. ಪ್ರಭಾವ ಬೀರುವುದು ಎಂದರೆ ನಮ್ಮಲ್ಲಡಗಿರುವ ಸದ್ಗುಣಗಳಿಂದ ಇತರರನ್ನು ಒಳ್ಳೆಯ ವ್ಯಕ್ತಿಯನ್ನಾಗಿಸಲು ಮುಂದಾಗಬೇಕು. ಇನ್ನು ಕೊನೆಯದಾಗಿ ಇಂದ್ರಿಯ ನಿಗ್ರಹ. ಮೊದಲ ಏಳು ಸಿದ್ಧಿಗಳು ಫಲಿಸಬೇಕೆಂದರೆ ಈ ಕೊನೆಯ ಇಂದ್ರಿಯ ನಿಗ್ರಹ ನಮ್ಮಲ್ಲಿರಬೇಕು. ಎಂತಹ ಕಷ್ಟಕಾಲದಲ್ಲಿಯೂ ಇಂದ್ರಿಯಗಳು ನಮ್ಮ ಅಂಕೆಯನ್ನು ತಪ್ಪಿಹೋಗದಂತೆ ನೋಡಬೇಕು. ಆಸೆ ಆಕಾಂಕ್ಷೆಗಳನ್ನು ಇಡೇರಿಸಿಕೊಳ್ಳುವಾಗ ಜಾಗ್ರತೆವಹಿಸಬೇಕು. ಜ್ಞಾನೆಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ನಮ್ಮ ಹಿಡಿತದಲ್ಲಿದ್ದಾಗ ಮಾತ್ರ ಅಷ್ಟಸಿದ್ಧಿ ಫಲಿಸುವುದು.

ಸಿದ್ಧಿದಾತ್ರಿಯು ಅಷ್ಟಸಿದ್ಧಿಯನ್ನು ಎಲ್ಲರಿಗೂ ನೀಡಲಿ, ಇಡೀ ಜಗತ್ತಿಗೆ ಸನ್ಮಂಗಳವನ್ನುಂಟುಮಾಡಲಿ ಎಂಬುದು ಈ ದಿನದ ಪ್ರಾರ್ಥನೆ.
ಮುಂದುವರಿಯುವುದು..

|| ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳವಾಗಿ ಜೀವಿಸಿ||
ವಿಷ್ಣು ಭಟ್ಟ, ಹೊಸ್ಮನೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here