Home ಧಾರ್ಮಿಕ ಸುದ್ದಿ ಆಂಜನೇಯಸ್ವಾಮಿಗೆ ನವಕ ಕಲಶಾಭಿಷೇಕ

ಆಂಜನೇಯಸ್ವಾಮಿಗೆ ನವಕ ಕಲಶಾಭಿಷೇಕ

1060
0
SHARE

ಮಾಣಿ: ಮಾಣಿ ಪೆರಾಜೆ ಶ್ರೀರಾಮ ಚಂದ್ರಾಪುರ ಮಠದ ಆವರಣದಲ್ಲಿರುವ ಆಂಜನೇಯ ಸ್ವಾಮಿ ಸನ್ನಿಧಿಯ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಶನಿವಾರ ಬೆಳಗ್ಗೆ ವೇ| ಮೂ| ಮಿತ್ತೂರು ತಿರುಮಲೇಶ್ವರ ಭಟ್‌ ಶ್ರೀ ಗುರುನಿಲಯ, ವೇ| ಮೂ| ಮಿತ್ತೂರು ಗೋಪಾಲಕೃಷ್ಣ ಭಟ್‌ ಹಾಗೂ ಅರ್ಚಕ ವಿಘ್ನೇಶ್ವರ ಭಟ್‌ ಅವರ ನೇತೃತ್ವದಲ್ಲಿ ಗಣಪತಿ ಹವನ, ನವಕಕಲಶಾಭಿಷೇಕ, ಕಲ್ಪೋಕ್ತ ಪೂಜೆ ನೆರವೇರಿತು.

ಶ್ರೀರಾಮಚಂದ್ರಾಪುರ ಮಠದ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್‌, ಕಾರ್ಯದರ್ಶಿ ಬಂಗಾರಡ್ಕ ಜನಾ ರ್ದನ ಭಟ್‌, ಕೋಶಾಧಿಕಾರಿ ಮೈಕೆ ಗಣೇಶ ಭಟ್‌, ಸದಸ್ಯ ಮುದ್ರಜೆ ಗೋವಿಂದ ಭಟ್‌, ವಲಯದ ಅಧ್ಯಕ್ಷ ಕಂಪದಕೋಡಿ ಶಂಕರ ಭಟ್‌, ಮಾತೃ ಪ್ರಧಾನ ಮಹಾಲಕ್ಷ್ಮೀ ಭಟ್‌ ಮಿತ್ತೂರು, ಮಾಣಿ ವಲಯ ಕಾರ್ಯದರ್ಶಿ ಶಿವಪ್ರಸಾದ್‌ ಕೈಂತಜೆ, ಮ್ಯಾನೇಜರ್‌ ಶಿವಪ್ರಸಾದ್‌, ವೇದಾಧ್ಯಯನ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here