ಬಂಟ್ವಾಳ : ಮೂಡನಡು ಗೋಡು ಗ್ರಾಮ ದಡ್ಡಲಕಾಡು ದೇವಿನಗರ ಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದ ಅಖಂಡ ನವಾಹ ಭಜನ ಸಂಕೀರ್ತನೆ, ಪ್ರತಿಷ್ಠಾ ವರ್ಧಂತಿ ಬಗ್ಗೆ ಗುರುವಾರ ಹೊರೆಕಾಣಿಕೆ ಮೆರವಣಿಗೆ ಜರಗಿತು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಎದುರಲ್ಲಿ ಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು.
ಪ್ರಧಾನ ಅರ್ಚಕ ಚಂದಪ್ಪ ಪೂಜಾರಿ, ಲೊಕೇಶ್ ಪೂಜಾರಿ, ಗೌರವ ಅಧ್ಯಕ್ಷ ಕೃಷ್ಣಪ್ಪ ನಾಯ್ಕ, ಆಡಳಿತ ಸಮಿತಿ ಅಧ್ಯಕ್ಷ ಕೇಶವ ಗೌಡ, ಪ್ರ. ಕಾರ್ಯದರ್ಶಿ ಹರೀಶ್ ಎಸ್. ಕುಲಾಲ್, ಕ್ಷೇತ್ರದ ನವಾಹ ಭಜನ ಸಮಿತಿ ಅಧ್ಯಕ್ಷ ಧರ್ಣಪ್ಪ ಪೂಜಾರಿ, ರಾಮಚಂದ್ರ ಗೌಡ ಮಣಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಸಂಚಾಲಕ ರಾಮ್ದಾಸ್ ಬಂಟ್ವಾಳ, ಜಿ. ಆನಂದ, ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ಗೌರವಾಧ್ಯಕ್ಷ ರಾಮಚಂದ್ರ ಶೆಟ್ಟಿ ದಂಡೆ ಸಹಿತ ಎಲ್ಲ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.