ಮಹಾನಗರ : ಮಳೆ ಶಾಂತ ವಾಗಿ ಜನರು, ಪಶುಪಕ್ಷಿ ಸಂಕುಲಗಳು ಸುಖ ನೆಮ್ಮದಿಯ ಜೀವನ ನಡೆಸಲು ಕೃಪೆ ತೋರುವಂತೆ ಪ್ರಾರ್ಥಿಸಿ ಕದ್ರಿ ಶ್ರೀ ಮಂಜುನಾಥ ದೇವರ ಸಾನ್ನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ ಸೋಮವಾರ ನೆರವೇರಿತು.
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ತಂತ್ರಿಗಳಾದ ವಿಟuಲ್ ದಾಸ್ ತಂತ್ರಿ, ಪ್ರಧಾನ ಅರ್ಚಕ ವಾಸುದೇವ ಭಟ್, ಅರ್ಚಕ ರಾಮಣ್ಣ ಅಡಿಗ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎ.ಜೆ. ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸದಸ್ಯರಾದ ದಿನೇಶ್ ದೇವಾಡಿಗ, ಹರಿನಾಥ್ ಜೋಗಿ, ದಯಾಕರ ಮೆಂಡನ್, ಸುರೇಶ್ ಕುಮಾರ್, ರಂಜನ್ ಕುಮಾರ್, ಪುಪ್ಪಲತಾ ಶೆಟ್ಟಿ, ಚಂದ್ರಕಲಾ, ದೀಪಕ್ ರಾವ್, ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಸುಧಾಕರ ರಾವ್ ಪೇಜಾವರ, ಸುಂದರ್ ಶೆಟ್ಟಿ, ಕಾರ್ಪೊರೇಟರ್ ಅಶೋಕ್ ಡಿ.ಕೆ., ಶಶಿಧರ ಹೆಗ್ಡೆ ಹಾಗೂ ದೇಗುಲದ ಸಿಬಂದಿಗಳು ಸೇರಿಕೊಂಡು ಶ್ರೀ ಮಂಜುನಾಥ ದೇವರಲ್ಲಿ ದೀಪ ಪ್ರಜ್ವಲಿಸಿ, ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.
ಪ್ರಕೃತಿ ವಿಕೋಪ ಪರಿಹಾರದ ಬಗ್ಗೆ ಭಕ್ತರಿಗೆ ದೇಣಿಗೆ ನೀಡಲು ಸಹಕಾರವಾಗುವಂತೆ ದೇಗುಲದಲ್ಲಿ ಪ್ರಕೃತಿ ವಿಕೋಪ ನೆರೆ ಪರಿಹಾರ ನಿಧಿ ಎಂಬ ಹುಂಡಿಯನ್ನು ಸ್ಥಾಪಿಸಲಾಗಿದೆ. ಭಕ್ತರು ತಮ್ಮ ದೇಣಿಗೆಯನ್ನು ಈ ಹುಂಡಿಯಲ್ಲಿ ಹಾಕಬಹುದೆಂದು ದೇಗುಲದ ಪ್ರಕಟನೆೆಯಲ್ಲಿ ತಿಳಿಸಿದೆ.