ನರಿಮೊಗರು: ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ ದಲ್ಲಿ ನವರಾತ್ರಿಯ ಲಲಿತಾ ಪಂಚಮಿ ಪ್ರಯುಕ್ತ ಶ್ರೀದೇವಿ ಸನ್ನಿಧಿಯಲ್ಲಿ ವಿಶೇಷ ಹೂವಿನ ಪೂಜೆ, ಆಯುಧ ಪೂಜೆ ನಡೆಯಿತು. ಪುರೋಹಿತ .
ರಮೇಶ ಕುದ್ವ ಣ್ಣಾಯ ಅವರು ಹೂವಿನ ಪೂಜೆ ನಡೆಸಿಕೊಟ್ಟರು. ಶ್ರೀ ದೇವಳದ ಅರ್ಚಕ ರಮೇಶ ಬೈಪಾಡಿತ್ತಾಯ ಅವರು ಶ್ರೀ ದೇವರಿಗೆ ಮಹಾಪೂಜೆ ನೆರವೇರಿಸಿದರು. ಲಕ್ಷ್ಮೀಶ ರಾವ್ ಪುತ್ತಿಲ, ಕೃಷಪ್ರಸಾದ್ ಶರ್ಮ ಸಹಾಯಕ ರಾಗಿ ಸಹಕರಿಸಿದರು.
ಡಯಾಸ್ ಕೊಡುಗೆ ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ಕೆ. ಸುಂದರ ಗೌಡ ನಡುಬೈಲು ಅವರು ಶ್ರೀ ದೇವಳದ ಸಭಾ ವೇದಿಕೆಗೆ ಡಯಾಸ್ ಅನ್ನು ಕೊಡುಗೆಯಾಗಿ ನೀಡಿದರು.