ಮುಕ್ವೆ : ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಸಾರ್ವ ಜನಿಕ ಶ್ರೀ ಮಹಾಮೃತ್ಯುಂಜಯ ಹೋಮ, ವರ್ಷಾವಧಿ ಜಾತ್ರೆ ಪ್ರಯುಕ್ತ ಮಾ. 9ರಂದು ಗೊನೆ ಮೂಹೂರ್ತ ನಡೆಯಿತು. ದೇವಸ್ಥಾನದ ಅರ್ಚಕ ರಮೇಶ ಬೈಪಾಡಿತ್ತಾಯ ಧಾರ್ಮಿಕ ವಿಧಿ- ವಿಧಾನ ನಡೆಸಿಕೊಟ್ಟರು. ಶಿವಪ್ರಸಾದ್ ಶಾಂತಿ ಗೋಡು ಸಹಕರಿಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ನಡುಬೈಲು ಗುತ್ತು, ಸದಸ್ಯರಾದ ಸೀತಾರಾಮ ಗೌಡ ಮುಂಡತ್ತೋಡಿ, ಜನಾರ್ದನ ಜೋಯಿಸ ಕುತ್ತಿಗದ್ದೆ, ಜಯಾನಂದ ಆಳ್ವ ಪಟ್ಟೆ, ಶಕುಂತಳಾ ನೀಲಪ್ಪ ಪೂಜಾರಿ ಕುರೆಮ ಜಲು, ಗಣೇಶ್ ನಾಯ್ಕ ಕೋಡಿಬೈಲು, ಜಾತ್ರೆ ಸಮಿತಿ ಅಧ್ಯಕ್ಷ ಕೆ. ಸುಂದರ ಗೌಡ ನಡುಬೈಲು, ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾದ ಕೆ. ಗುರುರಾಜ ಪುತ್ತೂರಾಯ, ನಾಗೇಶ್ ನಾೖಕ್, ಪ್ರಮುಖರಾದ ಚಂದ್ರಶೇಖರ ಕುರೆಮಜಲು, ಮಾಧವ ಸಾಲ್ಯಾನ್ ಶಿವಗಿರಿ ಕುರೆಮಜಲು, ಮಾಧವ ಮಡಿವಾಳ, ಬಾಳಪ್ಪ ಗೌಡ ಕೆ., ರಾಮಣ್ಣ ಶೆಟ್ಟಿ ಮರ್ತಡ್ಕ, ತಿಮ್ಮಪ್ಪ ಗೌಡ ನಡುಬೈಲು, ಸಿಬ್ಬಂದಿ ಕೇಶವ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.