Home ಧಾರ್ಮಿಕ ಸುದ್ದಿ ನರಿಮೊಗರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನ ಸಂಕ್ರಮಣ: ದ್ವಾದಶ ನಾಳಿಕೇರ ಗಣಪತಿ ಹೋಮ

ನರಿಮೊಗರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನ ಸಂಕ್ರಮಣ: ದ್ವಾದಶ ನಾಳಿಕೇರ ಗಣಪತಿ ಹೋಮ

1624
0
SHARE

ನರಿಮೊಗರು: ಇಲ್ಲಿನ ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಜ. 14ರಂದು ಮಕರ ಸಂಕ್ರಮಣದ ಪ್ರಯುಕ್ತ ದ್ವಾದಶ ನಾಳಿಕೇರ ಗಣಪತಿ ಹೋಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪುರೋಹಿತ ರಮೇಶ ಕುದ್ವಣ್ಣಾಯರವರು ಗಣಪತಿ ಹೋಮ ಹಾಗೂ ಶ್ರೀದೇಗುಲದ ಅರ್ಚಕ ರಮೇಶ ಬೈಪಾಡಿತ್ತಾಯ ಅವರು ಶ್ರೀದೇವರಿಗೆ ಮಹಾಪೂಜೆ ನಡೆಸಿಕೊಟ್ಟರು.

ಬೆಳಗ್ಗೆ ಧನುಪೂಜೆ ನಡೆಯುವು ದರೊಂದಿಗೆ ಕಳೆದ ಒಂದು ತಿಂಗಳಿನಿಂದ ಶ್ರೀದೇಗುಲದಲ್ಲಿ ನಿತ್ಯ ಬೆಳಗ್ಗೆ ನಡೆಯುತ್ತಿದ್ದ ಧನುಪೂಜೆ ಸಮಾಪ್ತಿಗೊಂಡಿತು. ಶಿವಪ್ರಸಾದ್‌ ಶಾಂತಿಗೋಡು, ಕೃಷ್ಣಪ್ರ ಸಾದ್‌ ಶರ್ಮ, ಮುರಳಿರವರು ಸಹಕರಿಸಿ ದರು. ಶ್ರೀರಂಗ ಶಾಸ್ತ್ರಿ ಮಾಣಿಲ. ವಿ.ವಿ. ನಾರಾಯಣ ಭಟ್ ಅವರು ಧನುಪೂಜೆ ಸಂದರ್ಭ ರುದ್ರ ಪಾರಾಯಣ ಪಠಿಸಿದರು.

ಹೈಪವರ್‌ ಜನರೇಟರ್‌

ಶ್ರೀದೇಗುಲದ ಸಭಾಭವನದ ಉಪಯೋಗಕ್ಕಾಗಿ, ಭಕ್ತರ ಸಂಗ್ರಹದಿಂದ ಸುಮಾರು 3ಲಕ್ಷ ರೂ. ವೆಚ್ಚದಲ್ಲಿ ಖರೀದಿ ಸಲಾಗಿರುವ ಹೈ ಪವರ್‌ ಜನರೇಟರನ್ನು ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಎನ್‌. ಕೆ. ಜಗನ್ನಿವಾಸರಾವ್‌ ಅವರು ಲೋಕಾರ್ಪಣೆಗೊಳಿಸಿದರು.

ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಮುಂಡೂರು ಗ್ರಾ.ಪಂ. ಅಧ್ಯಕ್ಷ ಎಸ್‌.ಡಿ. ವಸಂತ, ಪ್ರಗತಿಪರ ಕೃಷಿಕ ವೇದನಾಥ ಸುವರ್ಣ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್‌, ಸದಸ್ಯರಾದ ಸೀತಾರಾಮ ಗೌಡ ಮುಂಡತ್ತೋಡಿ, ಜಯಾನಂದ ಆಳ್ವ ಮುಂಡೂರು, ಶಕುಂತಳಾ ನೀಲಪ್ಪ ಪೂಜಾರಿ ಕೆ., ಮಾಜಿ ಸದಸ್ಯರಾದ ಕೆ. ಸುಂದರ ಗೌಡ ನಡುಬೈಲು, ನಾಗೇಶ್‌ ನಾೖಕ್‌ ನರಿಮೊಗರು, ಕೆ. ಗುರುರಾಜ ಪುತ್ತೂರಾಯ, ಗುಮಾಸ್ತ ಕೇಶವ ನಾಯ್ಕ, ಮುಂಡೂರು ಕುಕ್ಕಿನಡ್ಕ ಶ್ರೀಸುಬ್ರಾಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮೋನಪ್ಪ ಕರ್ಕೇರ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here