Home ಧಾರ್ಮಿಕ ಸುದ್ದಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶ್ರೀಕೃಷ್ಣ ಲೀಲೋತ್ಸವ

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶ್ರೀಕೃಷ್ಣ ಲೀಲೋತ್ಸವ

•ಶ್ರೀಕೃಷ್ಣ ರಾಧಾ ವೇಷಧಾರಿ ಪುಟಾಣಿಗಳ ಕಲರವ | ಮೆರವಣಿಗೆಗೆ ಮೆರಗು ತಂದ ಹುಲಿ ವೇಷ

1484
0
SHARE

ನರಿಮೊಗರು: ಇಲ್ಲಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀಕೃಷ್ಣ ಲೀಲೋತ್ಸವ ನಡೆಯಿತು.

ಶ್ರೀಕೃಷ್ಣ ರಾಧಾ ವೇಷಧಾರಿ ಪುಟಾಣಿಗಳ ಕಲರವ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಏರ್ಪಡಿಸಲಾದ ವಿವಿಧ ಕ್ರೀಡಾಕೂಟಗಳು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಗಮನ ಸೆಳೆಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳಿಂದ ಶ್ರೀಕೃಷ್ಣನ ಮೂರ್ತಿ ಮೆರವಣಿಗೆ, ಹುಲಿ ವೇಷ, ಘೋಷ್‌ ತಂಡ, ಕೀಲು ಕುದುರೆ, ಬಣ್ಣದ ಕೊಡೆಗಳು, ಭಜನೆಯೊಂದಿಗೆ ವೈಭವದಿಂದ ನಡೆಯಿತು.

ಮೆರವಣಿಗೆಯ ಬಳಿಕ ವಿದ್ಯಾರ್ಥಿಗಳಿಂದ ಹುಲಿಕುಣಿತ, ಬಯಲು ರಂಗಮಂದಿರದಲ್ಲಿ ಶ್ರೀಕೃಷ್ಣನ ಸ್ತುತಿ, ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಸ್ಪರ್ಧೆಗಳು ನಡೆದವು. ಅಂಗನವಾಡಿಗಳ ಪುಟಾಣಿ ಶ್ರೀಕೃಷ್ಣ ರಾಧಾ ವೇಷಧಾರಿಗಳು, ಸಂಸ್ಥೆಯ ಪುಟಾಣಿಗಳು ಪಾಲ್ಗೊಂಡಿದ್ದರು. ಎಲ್ಲ ವೇಷಧಾರಿಗಳಿಗೂ ಸ್ಮರಣಿಕೆ ನೀಡಿಲಾಯಿತು.

ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಉದ್ಘಾಟಿಸಿ ಮಾತನಾಡಿ, ಧರ್ಮ ಸಂಸ್ಥಾಪಕ ಶ್ರೀಕೃಷ್ಣನ ಜೀವನ ಎಂದಿಗೂ ಪ್ರಸ್ತುತ. ಪ್ರತೀ ವರ್ಷ ವಿಶಿಷ್ಟವಾಗಿ ಶ್ರೀಕೃಷ್ಣ ಲೀಲೋತ್ಸವ ಆಚರಿಸುತ್ತಿರುವ ಸಾಂದೀಪನಿ ವಿದ್ಯಾಸಂಸ್ಥೆ ಉತ್ತಮ ಹಾಗೂ ಧರ್ಮ ಬೋಧನೆಯ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಭಕ್ತಕೋಡಿ ಎಸ್‌.ಜಿ.ಎಂ. ಪ್ರೌಢಶಾಲಾ ಮುಖ್ಯಗುರು ಶ್ರೀನಿವಾಸ ಎಚ್.ಬಿ., ಪ್ರಗತಿಪರ ಕೃಷಿಕ ರವಿಕುಮಾರ್‌ ದೊಡ್ಡಬಳ್ಳಾಪುರ, ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆದ್ಕಾರು, ಶಾಲಾ ಸಂಚಾಲಕ ಭಾಸ್ಕರ ಆಚಾರ್‌ ಹಿಂದಾರ್‌ ಶುಭ ಹಾರೈಸಿದರು. ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಶಿಕ್ಷಕಿ ಜಯಮಾಲಾ ವಿ.ಎನ್‌. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಸುಕನ್ಯಾ ವಂದಿಸಿದರು. ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here