Home ಧಾರ್ಮಿಕ ಸುದ್ದಿ ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನ ‘ಬಿ’ ದರ್ಜೆಗೆ

ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನ ‘ಬಿ’ ದರ್ಜೆಗೆ

1417
0
SHARE

ನರಿಮೊಗರು: ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನವನ್ನು ಪ್ರವರ್ಗ ಸಿಯಿಂದ ಪ್ರವರ್ಗ ಬಿಗೆ ಮೇಲ್ದರ್ಜೆಗೇರಿಸಲಾಗಿದೆ.

ಈ ದೇವಸ್ಥಾನದ ವಾರ್ಷಿಕ ಆದಾಯ 5 ಲಕ್ಷ ರೂ. ಮೀರಿರುವುದರಿಂದ ನಿಯಮ 3(ಬಿ) ಪ್ರಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಪ್ರವರ್ಗ ಬಿಗೆ ಸೇರಿದ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ ಎಂದು ಧಾರ್ಮಿಕ ದತ್ತಿ ಇಲಾಖಾ ಜಿಲ್ಲಾಧಿಕಾರಿ ಗ್ರಾಮದ ಮುಖಂಡ ಶಶಿಧರ್‌ ವಿ.ಎನ್‌. ಅವರ ಮನವಿಗೆ ಹಿಂಬರಹ ಪತ್ರದ ಮೂಲಕ ತಿಳಿಸಿದ್ದಾರೆ.

ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಇಷ್ಟು ವರ್ಷಗಳ ಕಾಲ ಪ್ರವರ್ಗ ಸಿಗೆ ಒಳಪಟ್ಟ ಅಧಿಸೂಚಿತ ಸಂಸ್ಥೆಯಾಗಿತ್ತು. ಈ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಮಾಹಿತಿ ಪ್ರಕಾರ ದೇವಸ್ಥಾನದ ವಾರ್ಷಿಕ ಆಯವ್ಯಯ 20 ಲಕ್ಷ ರೂ.ಗೆ ಹೆಚ್ಚಿದ್ದು, ದೇವಸ್ಥಾನವನ್ನು ಮೇಲ್ದರ್ಜೆಗೆ ಏರಿಸಬೇಕು. ದೇವಸ್ಥಾನದ ಆಯ-ವ್ಯಯಗಳನ್ನು ಪರಿಶೀಲಿಸಿ ನಿಯಮಾನುಸಾರ ಪ್ರವರ್ಗ ಸಿಯಿಂದ ಮೇಲ್ದರ್ಜೆಗೇರಿಸಲು ತಿಳಿಸಲಾಗಿತ್ತು. ದೇವಸ್ಥಾನದ ಮೂರು ವರ್ಷಗಳ ಜಮಾ- ಖರ್ಚಿನ ವಿವರ ನೀಡುವಂತೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್‌ ಅವರಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖಾ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಪರಿಶೀಲಿಸಿ ದೇವಸ್ಥಾನವನ್ನು ಪ್ರವರ್ಗ ಬಿಗೆ ಸೇರಿದ ಸಂಸ್ಥೆ ಎಂದು ಪರಿಗಣಿಸಲಾಗಿದೆ.

LEAVE A REPLY

Please enter your comment!
Please enter your name here