ನರಿಮೊಗರು ಮೇ 13: ಇಲ್ಲಿನ ಮೃತ್ಯುಂಜಯೇಶ್ವರ ದೇವಸ್ಥಾನಕ್ಕೆ ಪರಮಾರ್ಗ ನಿವಾಸಿ ಹರ್ಷಿತಾ ಚೇತನ್ ಕುಮಾರ್ ಮತ್ತು ಮನೆಯವರು ವಿದ್ಯುತ್ಚಾಲಿತ ಘಂಟೆ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್, ಸದಸ್ಯರಾದ ಸೀತಾರಾಮ ಗೌಡ ಎಂ., ಜಯಾನಂದ ಆಳ್ವ, ಜಾತ್ರೆ ಸಮಿತಿಯ ಅಧ್ಯಕ್ಷ ಕೆ.ಸುಂದರ ಗೌಡ ನಡುಬೈಲು,ಪ್ರಮುಖರಾದ ವೇದನಾಥ ಸುವರ್ಣ ಅವರು ಕೊಡುಗೆ ಸ್ವೀಕರಿಸಿದರು.
ದೇವಸ್ಥಾನದ ಅರ್ಚಕ ರಮೇಶ್ ಬೈಪಾಡಿತ್ತಾಯ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಕೊಡುಗೆ ನೀಡಿದವರಿಗೆ ಶ್ರೀದೇವರ ಪ್ರಸಾದ ನೀಡಿದರು. ಕ್ಷೇತ್ರದ ಗುಮಾಸ್ತ ಕೇಶವ ನಾಯ್ಕ ಉಪಸ್ಥಿತರಿದ್ದರು.