Home ಧಾರ್ಮಿಕ ಸುದ್ದಿ “ನಾರಾಯಣ ಗುರುವರ್ಯರು ಪರಿವರ್ತನೆಯ ಹರಿಕಾರ’

“ನಾರಾಯಣ ಗುರುವರ್ಯರು ಪರಿವರ್ತನೆಯ ಹರಿಕಾರ’

891
0
SHARE

ಉಳ್ಳಾಲ : ಸಮಾಜದಲ್ಲಿದ್ದ ಅಸ್ಪೃಶ್ಯತೆ, ಜಾತಿ ಭೇದವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಾರಾಯಣ ಗುರುವರ್ಯರು ಪರಿವರ್ತನೆಯ ಹರಿಕಾರ ಎಂದು ವರ್ಕಲ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳ ಸಭಾಂಗ ಣದಲ್ಲಿ ಗುರುವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಯಲ್ಲಿ ಮಾತನಾಡಿದರು.

ಹಿಂದುಳಿದ ವರ್ಗದ ಜನರು ಒಂದು ಕಾಲದಲ್ಲಿ ದಾರಿಯಲ್ಲಿ ನಡೆದಾಡುವುದಕ್ಕೂ ಕಷ್ಟದ ಪರಿಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಹಿಂದುಳಿದ ವರ್ಗದ ಸಮಾಜದಲ್ಲಿ ನಾರಾಯಣ ಗುರುವರ್ಯರು ಹುಟ್ಟಿಬಂದು ಸಮಾಜದ ಪರಿವರ್ತನೆಗೆ ಕಾರಣೀಭೂತರಾದರು ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಉಪಕುಲಪತಿ ಡಾ| ಕಿಶೋರ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಚಲನಚಿತ್ರ ನಟ ಡಾ| ರಾಜಶೇಖರ ಕೋಟ್ಯಾನ್‌ ಭಾಗವಹಿಸಿದ್ದರು.

ಮಂಗಳೂರು ವಿವಿ ಬ್ರಹ್ಮಶ್ರೀ ನಾರಾಯಣ ಗುರು ಪೀಠದ ನಿರ್ದೇಶಕ ಮುದ್ದುಮೂಡುಬೆಳ್ಳೆ ಪ್ರಸ್ತಾವನೆಗೈದರು. ಕುಲಸಚಿವ ಪ್ರೊ| ಎ. ಎಂ. ಖಾನ್‌ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ನಿರ್ವಹಿಸಿದರು.

ಪಠ್ಯ ರೂಪ ಜಾರಿಯಾಗಬೇಕಿದೆ ಅಂದಿನ ಕಾಲದಲ್ಲಿ ಸಮಾಜದಲ್ಲಿದ್ದ ಸವಾಲುಗಳನ್ನು ಮೆಟ್ಟಿನಿಂತು ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರು ಸಮಾಜದ ಚಿಕಿತ್ಸಕನಾಗಿ ಕಾರ್ಯನಿರ್ವಹಿಸಿದ್ದಾರೆ. ನಾರಾಯಣ ಗುರುವರ್ಯರ ಆದರ್ಶಗಳು, ಸಾಧನೆಯ ಬಗ್ಗೆ ಪಠ್ಯದ ರೂಪದಲ್ಲಿ ಜಾರಿಯಾಗಬೇಕಿದೆ. ಈ ಬಗ್ಗೆ ಸದನದಲ್ಲಿ
ಪ್ರಸ್ತಾವಿಸುತ್ತೇನೆ.
 - ಕೋಟ ಶ್ರೀನಿವಾಸ ಪೂಜಾರಿ ಕರ್ನಾಟಕ ವಿಧಾನಪರಿಷತ್‌ನ ವಿಪಕ್ಷ ನಾಯಕ

LEAVE A REPLY

Please enter your comment!
Please enter your name here