Home ಧಾರ್ಮಿಕ ಸುದ್ದಿ ನಂಗಾರು: ಶ್ರೀ ವಿಷ್ಣುಮೂರ್ತಿ, ಧರ್ಮದೈವ, ಪರಿವಾರ ದೈವಗಳ ನೇಮ ನಡಾವಳಿ

ನಂಗಾರು: ಶ್ರೀ ವಿಷ್ಣುಮೂರ್ತಿ, ಧರ್ಮದೈವ, ಪರಿವಾರ ದೈವಗಳ ನೇಮ ನಡಾವಳಿ

767
0
SHARE

ಸುಳ್ಯ : ಜಾಲ್ಸೂರು ಗ್ರಾಮದ ನಂಗಾರು ಶ್ರೀ ವಿಷ್ಣುಮೂರ್ತಿ ಧರ್ಮದೈವ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ, ಧರ್ಮದೈವ ಮತ್ತು ಪರಿವಾರ ದೈವಗಳ ನೇಮ ನಡಾವಳಿ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ಬಳಿಕ ನಾಗತಂಬಿಲ, ವೆಂಕಟರಮಣ ದೇವರ ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ತೊಡಂಙಲ್‌, ಅನಂತರ ಅನ್ನ ಸಂತರ್ಪಣೆ, ಬಳಿಕ ವಿಷ್ಣುಮೂರ್ತಿ ದೈವದ ಕುಳ್ಚಾಟ, ಉಪದೈವಗಳಾದ ಕುಲೆ ಭೂತ, ಸತ್ಯಜಾವತೆ ನೇಮ, ಪಿಲಿಭೂತ ನೇಮ, ಪೊಟ್ಟ ದೈವದ ಕೋಲ, ಪಂಜುರ್ಲಿ ದೈವದ ನೇಮ ನಡೆಯಿತು. ಮರುದಿನ ಬೆಳಗ್ಗೆ ರಕ್ತೇಶ್ವರಿ ದೈವದ ಕೋಲ, ವಿಷ್ಣುಮೂರ್ತಿ ಮತ್ತು ಧರ್ಮ ದೈವಗಳ ಕೋಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಪಾಷಾಣಮೂರ್ತಿ ದೈವದ ನೇಮ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ದೈವಸ್ಥಾನದ ಆಡಳಿತ ಮೊಕ್ತೇಸರ ಮೋಹನ್‌ ನಂಗಾರು, ಪ್ರಮುಖರಾದ ಪುರುಷೋತ್ತಮ ನಂಗಾರು, ಚಿನ್ನಪ್ಪ ಗೌಡ, ಕಮಲಾಕ್ಷ, ಆತ್ಮ ರಾಮ, ಮನ್ಮಥ ನಂಗಾರು, ದಯಾನಂದ, ವೆಂಕಪ್ಪ ಗೌಡ, ರಾಮಣ್ಣ ಗೌಡ, ಚಂದ್ರಶೇಖರ, ತೀರ್ಥರಾಮ ನಂಗಾರು, ಜಯಂತಿ ನಂಗಾರು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here