Home ಧಾರ್ಮಿಕ ಸುದ್ದಿ ನಾಲೂರು ಶ್ರೀ ಶಂಕರ ನಾರಾಯಣ ದೇಗುಲಬ್ರಹ್ಮಕುಂಭಾಭಿಷೇಕ, ಉಗ್ರಾಣ ಮುಹೂರ್ತ

ನಾಲೂರು ಶ್ರೀ ಶಂಕರ ನಾರಾಯಣ ದೇಗುಲಬ್ರಹ್ಮಕುಂಭಾಭಿಷೇಕ, ಉಗ್ರಾಣ ಮುಹೂರ್ತ

1456
0
SHARE

ಕಡಬ: ಕುಟ್ರಾಪಾಡಿ ಗ್ರಾಮದ ನಾಲೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಬುಧವಾರ ವಿವಿಧ ಧಾರ್ಮಿಕ ವಿಧಿಗಳು ಜರಗಿತು.

ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮವು ಶ್ರೀ ಕಾಮಾಕ್ಷೀ ಶಾರದಾಂಬಾ ಕ್ಷೇತ್ರ ಹೆಬ್ಬೂರು ಶ್ರೀ ಕೋದಂಡಾಶ್ರಮ ಮಠದ ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪಾವಂಜೆ ಬ್ರಹ್ಮಶ್ರೀ ವಾಗೀಶ ಶಾಸ್ತ್ರಿ ತಂತ್ರಿಗಳ ನೇತೃತ್ವದಲ್ಲಿ ಮೇ 8ರಂದು ಮೊದಲ್ಗೊಂಡು 13ರ ವರೆಗೆ ಜರಗಲಿದೆ.

ಬುಧವಾರ ಬೆಳಗ್ಗೆ ಉಗ್ರಾಣ ಮುಹೂರ್ತ, ಕೊಪ್ಪರಿಗೆ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ಸಂಜೆ ಬಜೆತ್ತಡ್ಕ, ಮೀನಾಡಿ, ಕೇಪು ಹಾಗೂ ಕುಂಟೋಡಿ ಪರಿಸರದ ಭಕ್ತರಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು. ಬಳಿಕ ಶ್ರೀ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರಿಗೆ ಸ್ವಾಗತ ನಡೆದು ವಿವಿಧ ಧಾರ್ಮಿಕ ವಿಧಿಗಳು ನಡೆಯಿತು.

ಬ್ರಹ್ಮಕುಂಭಾಭಿಷೇಕ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್‌.ಕೆ. ಜಗನ್ನಿವಾಸ ರಾವ್‌, ಅಧ್ಯಕ್ಷ ಶಶಾಂಕ ಗೋಖಲೆ ಮಾರ್ಗದಮನೆ, ಜೀರ್ಣೋ ದ್ಧಾರ ಸಮಿತಿಯ ಅಧ್ಯಕ್ಷ ಕೆ. ಜ್ಞಾನೇಶ್‌ ರಾವ್‌ ಕಡಬ, ಕಾರ್ಯದರ್ಶಿ ಯೋಗೇಶ್‌ ಕೆ. ರಾವ್‌, ಬ್ರಹ್ಮಕುಂಭಾಭಿಷೇಕ ಮಹೋ ತ್ಸವ ಸಮಿತಿಯ ಕಾರ್ಯದರ್ಶಿ ರವಿ ಚಂದ್ರ ನಾಲೂರು, ಜತೆ ಕಾರ್ಯದರ್ಶಿ ಶಿವಪ್ರಸಾದ್‌ ರೈ ಮೈಲೇರಿ, ಕೋಶಾಧಿಕಾರಿ ಪ್ರಸನ್ನ ಕುಮಾರ್‌ ಪುತ್ರಬೈಲು, ದೇವಳದ ಅರ್ಚಕ ಶಶಿರಾಜ್‌ ಗಿರಿವನ, ಸಂಚಾಲಕರಾದ ತಿಮ್ಮಣ್ಣ ರೈ ಚಾವಡಿ, ನರೇಂದ್ರ ರಾವ್‌ ಪುತ್ರಬೈಲು (ಸ್ವಾಗತ), ಸುಂದರ ಗೌಡ ನಾಲೂರು (ಹೊರೆಕಾಣಿಕೆ), ಚಿದಾನಂದ ಗೌಡ ಕೊಡೆಂಕಿರಿ (ಸ್ವಯಂ ಸೇವಕ), ಉಮೇಶ್‌ ಶೆಟ್ಟಿ ಸಾಯಿರಾಂ (ಮಾಧ್ಯಮ), ಮೋನಪ್ಪ ಗೌಡ ನಾಡೋಳಿ (ಚಪ್ಪರ), ಶ್ರೀಧರ ರೈ ಕೊಡೆಂಕಿರಿ (ಸ್ವಚ್ಛತೆ), ಪ್ರದೀಪ್‌ ನಾಲಾಜೆ (ಧ್ವನಿ ಮತ್ತು ಬೆಳಕು), ತೀರ್ಥೇಶ್‌ ಗೌಡ ಕೊಡೆಂಕಿರಿ (ನೀರಾವರಿ), ಕೆ. ಗೋಪಾಲ ರಾವ್‌ ಮಡಿಯಾಲ, ಅನಾರು ಬಾಲಕೃಷ್ಣ ರಾವ್‌ (ಊಟೋಪಹಾರ), ನಾಗಣ್ಣ ಗೌಡ ಕೋಡಿಬೈಲು (ವಾಹನ ನಿಲುಗಡೆ), ಆನಂದ ಪೂಜಾರಿ ಆಲಾರ್ಮೆ (ಕಲಶ), ಶಿಶಿಧರ ರಾವ್‌ ಗಿರಿವನ (ಉಗ್ರಾಣ), ಅರುಣ್‌ಕುಮಾರ್‌ ಜೆಡೆಮನೆ (ವೈದಿಕ), ಯಶೋದಾ ಪೂವಳ (ಪಾನೀಯ), ಮಹೇಶ್‌ ನಿಟಿಲಾಪುರ, ಲಕ್ಷಿ ್ಮೕಶ ಬಂಗೇರ, ಕಾಶೀನಾಥ ಗೋಗಟೆ ಉಪಸ್ಥಿತರಿದ್ದರು.

ಮೇ 9ರ ಬೆಳಗ್ಗೆ ವೇದ ಪಾಠಾರಂಭ, ದ್ವಾದಶನಾರಿಕೇಳ ಮಹಾಗಣಪತಿ ಹೋಮ, ನವಗ್ರಹ ಶಾಂತಿ, ಮಂಟಪ ಪ್ರವೇಶ, ಕುಂಭೇಶ-ಕರ್ಕರೀ ಸ್ಥಾಪನ, ಅಗ್ನಿಜನನ, ಬಿಂಬ ಶುದ್ಧಿಕಲಶ ಸ್ಥಾಪನ, ಶಯ್ನಾನಿರ್ಮಾಣ, ಬಿಂಬಶುದ್ಧಿ, ಶಯ್ನಾನಯನ, ಸಂಜೆ ಏಕಾದಶವಾರ ಶ್ರೀ ರುದ್ರಪಾರಾಯಣ, ಶ್ರೀ ವಿಷ್ಣುಸಹಸ್ರನಾಮ ಜಪ, ಬಾಲಾಲಯದಲ್ಲಿ ಸಂಹಾರ ತಣ್ತೀಹೋಮ, ಪುರಸ್ಥರವಾಗಿ ಜೀವಕಲಶ ಸ್ಥಾಪನ, ಬಾಲಪ್ರತಿಮಾಚಲನ, ಬಿಂಬ-ಪೀಠ-ಬ್ರಹ್ಮಶಿಲಾ ಅಧಿವಾಸ ಕರ್ಮ, ಚಕ್ರಾಬ್ದ ಮಂಡಲ ಪೂಜೆ, ಪಂಚ ಕುಂಡಗಳಲ್ಲಿ ಪ್ರತಿಷ್ಠಾಧಿವಾಸ ಹೋಮಗಳು, ಶಿರಸ್ತತ್ವ ಹೋಮ, ಅಷ್ಟಬಂಧ ಶಕ್ತಿ ಹೋಮ, ಪ್ರಾಸಾಧಿವಾಸ ನಡೆಯಲಿದೆ. ಬಳಿಕ ಹೊರೆ ಕಾಣಿಕೆ ಸಮರ್ಪಣೆ, ಭಜನ ಕಾರ್ಯಕ್ರಮ ಉದ್ಘಾಟನೆ, ಭಜನ ಸೇವೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿನೋದ್‌ ಕುಮಾರ್‌ ಇವರ ಸಾರಥ್ಯದಲ್ಲಿ ಸ್ವರಶ್ರೀ ಮೆಲೊಡೀಸ್‌ ಮರ್ದಾಳ ಇವರಿಂದ ಭಕ್ತಿ ಸಂಗೀತ ನಡೆಯಲಿದೆ.

LEAVE A REPLY

Please enter your comment!
Please enter your name here