Home ಧಾರ್ಮಿಕ ಸುದ್ದಿ ನಲ್ಲೂರಂಗಡಿ: ಪದ್ಮಾವತಿ ಅಮ್ಮನವರ ಪ್ರತಿಷ್ಠೆ

ನಲ್ಲೂರಂಗಡಿ: ಪದ್ಮಾವತಿ ಅಮ್ಮನವರ ಪ್ರತಿಷ್ಠೆ

886
0
SHARE

ಪುಂಜಾಲಕಟ್ಟೆ : ಸಿದ್ಧಕಟ್ಟೆ ನಲ್ಲೂರಂಗಡಿಯಲ್ಲಿರುವ ಭಗವಾನ್‌ 1008 ಶ್ರೀ ಅನಂತನಾಥ ಸ್ವಾಮಿ ಬಸದಿ ಯಲ್ಲಿ ಜರಗಲಿರುವ ಧಾಮ ಸಂಪ್ರೋಕ್ಷಣೆ ಮತ್ತು ಪುನಃಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ರವಿವಾರ ವಾಸ್ತು ಪೂಜಾ ವಿಧಾನ, ನವಗ್ರಹ ಶಾಂತಿ, ಶ್ರೀ ಪದ್ಮಾವತಿ ಅಮ್ಮನವರ ಪ್ರತಿಷ್ಠೆ ನಡೆಯಿತು. ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮಿ ಮಾರ್ಗದರ್ಶನದಲ್ಲಿ, ಪ್ರತಿಷ್ಠಾ ಪುರೋಹಿತ ಚಂದ್ರನಾಥ ಇಂದ್ರ ನೇತೃತ್ವದಲ್ಲಿÉ, ಸಿದ್ಧಕಟ್ಟೆ ಎಲಿಯ ಮಾಗಣೆಯ ಜೈನ ಶ್ರಾವಕರ ಪ್ರಾಯೋ ಜಕತ್ವದಲ್ಲಿ ಪೂಜೆಗಳು ನಡೆದವು.
ಮಧ್ಯಾಹ್ನ 12.15ಕ್ಕೆ ಮುಖವಸ್ತ್ರ ಉದ್ಘಾಟನೆ, ಸಂಜೆ ಶ್ರೀ ಪದ್ಮಾವತಿ ಅಮ್ಮನವರ ಪ್ರತಿಷ್ಠೆ ನಡೆಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್‌, ಶ್ರೀಕ್ಷೇತ್ರ ಪಡ್ಡಾರಬೆಟ್ಟುವಿನ ಆಡಳಿತ ಮೊಕ್ತೇಸರ ಜೀವಂದರ್‌ ಕುಮಾರ್‌ ಜೈನ್‌, ಬಸದಿಯ ಆಡಳಿತ ಮಂಡಳಿ ಅಧ್ಯಕ್ಷ ಭೋಜ ಕೆ. ಸಂಗಬೆಟ್ಟು ಹೊಸಮನೆ, ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜಯರಾಜ ಹೆಗ್ಡೆ ಪುತ್ತಿಲ, ಪ್ರ. ಕಾರ್ಯದರ್ಶಿ ಅರ್ಕಕೀರ್ತಿ ಇಂದ್ರ, ಮೊಕ್ತೇಸರ ಪ್ರಕಾಶ್‌ ಜೈನ್‌ ಜಂಕಳ, ನ್ಯಾಯವಾದಿ ಶ್ರೇಯಾಂಸ ಕುಮಾರ್‌, ಸಹಕಾರಿ ಸಂಘಗಳ ಕಾನೂನು ಸಲಹೆಗಾರ ಅಪರಾಜಿತ ಆರಿಗ ಮತ್ತು ಅರ್ಕುಳ ಬೀಡಿನ ರತ್ನರಾಜ ಜೈನ್‌, ಸಮಿತಿ ಕಾರ್ಯದರ್ಶಿ ವಿನಯಚಂದ್ರ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಸುದರ್ಶನ ಜೈನ್‌, ಜೀರ್ಣೋದ್ಧಾರ ಸಮಿತಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

ಎ. 9ರಂದು ಬೆಳಗ್ಗೆ ಅಷ್ಟದಿಕ್ಷು ಧಾಮ ಸಂಪ್ರೋಕ್ಷಣೆ, ಚತುಃ ದಿಕ್ಷು ಹೋಮ, ಶ್ರೀ ಗಂಧ ಯಂತ್ರಾರಾಧನೆ ವಿಧಾನ, 11.02ಕ್ಕೆ ಶ್ರೀ ಅನಂತನಾಥ ಸ್ವಾಮಿ ಪ್ರತಿಷ್ಠೆ, ಮೇಗಿನ ನೆಲೆ ಪಾರ್ಶ್ವನಾಥ ಸ್ವಾಮಿ ಪ್ರತಿಷ್ಠೆ, ಶಿಖರಾರೋಹಣ, ಸಂಜೆ 5ರಿಂದ ಅಗ್ರೋಧಕ ಮೆರವಣಿಗೆ, ಬಳಿಕ ಧಾರ್ಮಿಕ ಸಭೆ ಯಲ್ಲಿ ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮತ್ತು ಮೂಡಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಲಿ ರುವರು. ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿರುವರು. ಎಸ್‌.ಸಿ.ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರಕುಮಾರ್‌ ಮೊದಲಾದವರು ಭಾಗವಹಿಸಲಿರುವರು.

LEAVE A REPLY

Please enter your comment!
Please enter your name here