ಕಾಣಿಯೂರು : ಚಾರ್ವಾಕ ಗ್ರಾಮದ ನಾಲ್ಕಂಬಶ್ರೀ ಉಳ್ಳಾಲ್ತಿ ಕ್ಷೇತ್ರ ನಾಲ್ಕಂಬ-ಮಾಚಿಲ ಕುಂಬ್ಲಾಡಿ ಇದರ ಜೀರ್ಣೋದ್ಧಾರ ಕಾರ್ಯದ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು.
ಶಿಲ್ಪಿ ರಮೇಶ್ ಕಾರಂತ ಅವರು ಶಿಲಾನ್ಯಾಸ ನೆರವೇರಿಸಿದರು. ನಾಲ್ಕಂಬ ಶ್ರೀ ಉಳ್ಳಾಲ್ತಿ ಕ್ಷೇತ್ರ ನಾಲ್ಕಂಬ-ಮಾಚಿಲ ಕುಂಬ್ಲಾಡಿ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ನ್ಯಾಯವಾದಿ ಎಂ. ವೆಂಕಪ್ಪ ಗೌಡ, ಸಮಿತಿ ಗೌರವಾಧ್ಯಕ್ಷೆ ಸಿ.ಜೆ. ಚಂದ್ರಕಲಾ, ಕಾರ್ಯದರ್ಶಿ ವಿಶ್ವನಾಥ ಅಂಬುಲ, ಮುಖ್ಯಸ್ಥರಾದ ನಾರ್ಣಪ್ಪ ಗೌಡ, ಪೆರ್ಗಡೆ ಗೌಡ, ಮೋನಪ್ಪ ಮಾಚಿಲ, ನೇಮಣ್ಣ ಅಂಬುಲ ಪ್ರವೀಣ ಕುಂಟ್ಯಾನ, ರಾಮಕೃಷ್ಣಗುಜ್ಜರ್ಮೆ, ಕುಶಾಲಪ್ಪ ಕೆಳಗಿನಕೇರಿ ಮಾಧವ ಕೆ.ವಿ. ಕೇಶವ ಗೌಡ ಕೆ. ಉಪಸ್ಥಿತರಿದ್ದರು.