Home ಧಾರ್ಮಿಕ ಸುದ್ದಿ ನಳೀಲು ಸುಬ್ರಹ್ಮಣ್ಯ ದೇವಸ್ಥಾನ ವರ್ಷಾವಧಿ ಜಾತ್ರೆ, ದೈವಗಳ ನೇಮ

ನಳೀಲು ಸುಬ್ರಹ್ಮಣ್ಯ ದೇವಸ್ಥಾನ ವರ್ಷಾವಧಿ ಜಾತ್ರೆ, ದೈವಗಳ ನೇಮ

69
0
SHARE

ಸವಣೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕಾರಣಿಕ ಹಾಗೂ ಸಿದ್ಧಿ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಳದ ವರ್ಷಾವಧಿ ಜಾತ್ರೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬ್ರಹ್ಮಶ್ರೀ ನಾಗೇಶ್‌ ತಂತ್ರಿಗಳ ನೇತೃತ್ವದಲ್ಲಿ ಫೆ. 23, 24 ರಂದು ನಡೆಯಿತು.

ಫೆ. 23ರ ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾಪೂಜೆ,
ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ನಡೆಯಿತು.

ಸಂಗೀತ ಭಕ್ತಿ ರಸಧಾರೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗುರುಪ್ರಿಯಾ ನಾಯಕ್‌ ಪುರುಷರಕಟ್ಟೆ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ
ನಡೆಯಿತು. ಫೆ. 24ರ ಪ್ರಾತಃ ಕಾಲ ವ್ಯಾಘ್ರ ಚಾಮುಂಡಿಯ ನೇಮ, ಬೆಳಗ್ಗೆ ರುದ್ರ ಚಾಮುಂಡಿಯ ನೇಮ, ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಿತು.

ಕಾರ್ತಿಕ್‌ ತಂತ್ರಿ ಕೆಮ್ಮಿಂಜೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೇವಳದ ಆಡಳಿತ ಮೊಕ್ತೇಸರ ಸಂತೋಷ್‌ ಕುಮಾರ್‌ ರೈ ಹಾಗೂ ಮೊಕ್ತೇಸರರಾದ ಮೋಹನ್‌ ದಾಸ್‌ ರೈ, ಡಾ| ಸುಚೇತಾ ಜೆ. ಶೆಟ್ಟಿ, ನಾರಾಯಣ ರೈ ಮೊದೆಲ್ಕಾಡಿ, ಎನ್‌. ಚಂದ್ರಶೇಖರ್‌ ರೈ, ಕಿಶೋರ್‌ ಕುಮಾರ್‌, ಅರುಣ್‌ ಕುಮಾರ್‌, ಸತೀಶ್‌ ರೈ, ಪ್ರವೀಣ್‌ ಕುಮಾರ್‌, ಅರ್ಚಕ ಶ್ರೀನಿವಾಸ್‌ ಹೆಬ್ಟಾರ್‌, ಹರಿನಾರಾಯಣ ಮನೋಳಿತ್ತಾಯ, ಮಣಿಕ್ಕಾರ ಪಾಲ್ತಾಡು ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಾಲ್ತಾಡು ನಾರಾಯಣ ರೈ, ಸದಸ್ಯ ವಿಲಾಸ್‌ ರೈ ಪಾಲ್ತಾಡು, ಪಾಲ್ತಾಡು ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ನವೀನ್‌ ರೈ ನಡುಮನೆ, ಕೊಳ್ತಿಗೆ ಗ್ರಾ.ಪಂ. ಮಾಜಿ ಸದಸ್ಯ ಸುನಿಲ್‌ ರೈ ಪಾಲ್ತಾಡು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here