Home ಧಾರ್ಮಿಕ ಸುದ್ದಿ ನಳೀಲು ಶ್ರೀ ಸುಬ್ರಹ್ಮಣ್ಯ ದೇಗುಲ: ಜಾತ್ರೆ ಸಂಪನ್ನ

ನಳೀಲು ಶ್ರೀ ಸುಬ್ರಹ್ಮಣ್ಯ ದೇಗುಲ: ಜಾತ್ರೆ ಸಂಪನ್ನ

252
0
SHARE

ಸವಣೂರು : ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇಗುಲದ ವರ್ಷಾವಧಿ ಮಹೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬ್ರಹ್ಮಶ್ರೀ ನಾಗೇಶ್‌ ತಂತ್ರಿಗಳ ನೇತೃತ್ವದಲ್ಲಿ ಫೆ. 23ರಂದು ನಡೆಯಿತು.

ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.

ದೇಗುಲದ ಆಡಳಿತ ಮೊಕ್ತೇಸರ ಸಂತೋಷ್‌ ಕುಮಾರ್‌ ರೈ ಹಾಗೂ ಮೊಕ್ತೇಸರರಾದ ಮೋಹನ್‌ದಾಸ್‌ ರೈ, ಡಾ| ಸುಚೇತಾ ಜೆ. ಶೆಟ್ಟಿ,ನಾರಾಯಣ ರೈ ಮೊದೆಲ್ಕಾಡಿ, ಎನ್‌. ಚಂದ್ರಶೇಖರ್‌ ರೈ, ಕಿಶೋರ್‌ ಕುಮಾರ್‌, ಅರುಣ್‌ ಕುಮಾರ್‌, ಸತೀಶ್‌ ರೈ, ಪ್ರವೀಣ್‌ ಕುಮಾರ್‌, ಅರ್ಚಕ ಶ್ರೀ ನಿವಾಸ್‌ ಹೆಬ್ಟಾರ್‌, ಹರಿನಾರಾಯಣ ಮನೋಳಿತ್ತಾಯ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here