Home ಧಾರ್ಮಿಕ ಸುದ್ದಿ ನಳೀಲು ಜಾತ್ರೆ: ಹಸಿರುವಾಣಿ ಸಮರ್ಪಣೆ

ನಳೀಲು ಜಾತ್ರೆ: ಹಸಿರುವಾಣಿ ಸಮರ್ಪಣೆ

299
0
SHARE

ಸವಣೂರು ಫೆ. 21: ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕಾರಣಿಕ ಹಾಗೂ ಸಿದ್ಧಿ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇಗುಲದ ಜಾತ್ರೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬ್ರಹ್ಮ ಶ್ರೀ ನಾಗೇಶ್‌ ತಂತ್ರಿಗಳ ನೇತೃತ್ವದಲ್ಲಿ ಫೆ. 22, 23ರಂದು ನಡೆಯಲಿದ್ದು, ಹಸಿರುವಾಣಿ ಸಮರ್ಪಣೆ ಫೆ. 21ರಂದು ನಡೆಯಿತು.

ಫೆ. 22ರಂದು ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಭಂಡಾರ ತೆಗೆದು, ವಲ್ಮೀಕರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಫೆ. 23ರಂದು ಪ್ರಾತಃಕಾಲ ವ್ಯಾಘ್ರ ಚಾಮುಂಡಿಯ ನೇಮ, ಬೆಳಿಗ್ಗೆ ರುದ್ರ ಚಾಮುಂಡಿಯ ನೇಮ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಲಿದೆ. ಅರ್ಚಕ ಹರಿನಾರಾಯಣ ಮನೋಳಿತ್ತಾಯ ಧಾರ್ಮಿಕ ವಿಧಿ ನೆರವೇರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್‌ ಕುಮಾರ್‌ ರೈ ನಳೀಲು, ಮೊಕ್ತೇಸರರಾದ ಮೋಹನ್‌ದಾಸ್‌ ರೈ ಎನ್‌. ,ಎನ್‌. ಚಂದ್ರಶೇಖರ್‌ ರೈ, ಕಿಶೋರ್‌ ಕುಮಾರ್‌ ರೈ, ಸತೀಶ್‌ ರೈ, ಅರುಣ್‌ ಕುಮಾರ್‌ ರೈ, ಪ್ರವೀಣ್‌ ಕುಮಾರ್‌, ಪಾಲ್ತಾಡು ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ನವೀನ್‌ ರೈ ನಡುಮನೆ, ವಿಠಲ ಶೆಟ್ಟಿ ಪಾಲ್ತಾಡಿ ಹಾಗೂ ಮುಂಡಪ್ಪ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here