ಬೆಳ್ತಂಗಡಿ: ನಾಳ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆಯ ಮಹಾ ರಥೋತ್ಸವದ ದಿನವಾದ ರವಿವಾರ ಮಧ್ಯಾಹ್ನ ಶ್ರೀ ದೇವರ ದರ್ಶನ ಬಲಿ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.
ಚಂದ್ರಮಂಡಲ ಉತ್ಸವ ಜಾತ್ರೆಯಲ್ಲಿ ಶನಿವಾರ ರಾತ್ರಿ ಚಂದ್ರಮಂಡಲ ಉತ್ಸವ, ರಥಬೀದಿ ಕಟ್ಟೆಪೂಜೆ, ಮಹಾಪೂಜೆ, ನಿತ್ಯ ಬಲಿ, ದೀಪದ ಬಲಿ ಜರಗಿತು.
ರವಿವಾರ ಬೆಳಗ್ಗಿನಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ದರ್ಶನ ಪ್ರಸಾದ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ಇಳಿಯುವುದು, ರಾತ್ರಿ ರಥಕಲಶ, ದೇವರ ಬಲಿ ಹೊರಟು ಉತ್ಸವ, ಕೊಡಮಣಿತ್ತಾಯಿ ಗಗ್ಗರ ಸೇವೆ, ಮಹಾರಥೋತ್ಸವ ನಡೆಯಿತು.