Home Uncategorized ನಾಗಸಾನ್ನಿಧ್ಯ ಪ್ರತಿಷ್ಠೆ, ದೈವಗಳ ಪುನರ್‌ ಪ್ರತಿಷ್ಠೆ

ನಾಗಸಾನ್ನಿಧ್ಯ ಪ್ರತಿಷ್ಠೆ, ದೈವಗಳ ಪುನರ್‌ ಪ್ರತಿಷ್ಠೆ

1106
0
SHARE

ನೆಲ್ಯಾಡಿ : ಕೌಕ್ರಾಡಿ ಗ್ರಾಮದ ಕಟ್ಟೆಮಜಲು ಶ್ರೀ ದೂಮಾವತಿ, ರಕ್ತೇಶ್ವರಿ, ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ನೂತನವಾಗಿ ಜೀರ್ಣೋದ್ದಾರಗೊಂಡ ನಾಗ ಸಾನ್ನಿಧ್ಯ ಪ್ರತಿಷ್ಠೆ,ದೈವಗಳ ಪುನರ್‌ ಪ್ರತಿಷ್ಠೆ ಹಾಗೂ ನೇಮ ಕಾರ್ಯಕ್ರಮ ನಡೆಯಿತು.

ಶ್ರೀ ಧೂಮಾವತಿ, ರಕ್ತೇಶ್ವರಿ ಪರಿವಾರ ದೈವಗಳ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ಹೋಮ ನಡೆಯಿತು. ಬಳಿಕ ಮುಳಿಂಗಾರು ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ತಂಬಿಲ ಸೇವೆ ನಡೆಯಿತು. ನಂತರ ಹೊರೆಕಾಣಿಕೆ ಸಮರ್ಪಣೆ, ಅನ್ನಪ್ರಸಾದ ವಿತರಣೆ ಮಾಡಲಾಯಿತು.

ವೈದಿಕರ ಆಗಮನ, ಸ್ವಸ್ತಿ ಪುಣ್ಯಾಹವಾಚನ, ಸಾಮೂಹಿಕ ಪ್ರಾರ್ಥನೆ, ಸಪ್ತತ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೊಘ್ನ ಹೋಮ, ಶ್ರೀ ಮಹಾಸುದರ್ಶನ ಹೋಮ, ಬಿಂಬಶುದ್ಧಿ, ಬಿಂಬಾಧಿವಾಸ, ನಾಗ ಅಧಿವಾಸ, ವಾಸ್ತುಹೋಮ, ವಾಸ್ತುಪೂಜೆ, ದಿಕ್ಪಾಲಕ ಬಲಿ, ಶ್ರೀ ದುರ್ಗಾಪೂಜೆ ನಡೆಯಿತು.

ಹಾರ್ಪಳ ಕುತ್ರಾಡಿ ಶ್ರೀಧರ ನೂಜಿನ್ನಾ ಯರ ನೇತೃತ್ವದಲ್ಲಿ ಶ್ರೀ ನಾಗದೇವರ ಹಾಗೂ ಶ್ರೀ ಧೂಮಾವತಿ, ಶ್ರೀ ರಕ್ತೇಶ್ವರಿ, ಶ್ರೀ ಬಚ್ಚನಾಯಕ, ಶ್ರೀ ಶಿರಾಡಿ ದೈವ, ಶ್ರೀ ಪಂಜುರ್ಲಿ, ಶ್ರೀ ಕಲ್ಲುರ್ಟಿ ಹಾಗೂ ಶ್ರೀ ಗುಳಿಗ ದೈವಗಳ ಪುನರ್‌ ಪ್ರತಿಷ್ಠೆ ನಡೆದು ಕಲಶಾಭಿಷೇಕ ನಡೆಯಿತು.

ಸಂಜೆ ಧಾರ್ಮಿಕ ಸಭೆ, ರಾತ್ರಿ ಭಂಡಾರ ತೆಗೆದು ನೇಮ ನಡೆಯಿತು. ದೈವಸ್ಥಾನದ ಅಧ್ಯಕ್ಷ ಸುಧೀರ್‌ ಕುಮಾರ್‌, ಕಾರ್ಯದರ್ಶಿ ಸುರೇಶ್‌ ನಾಯ್ಕ, ಕೋಶಾಧಿಕಾರಿ ಯತೀಶ್‌ ಶೆಟ್ಟಿ, ಸಮಿತಿ ಸದಸ್ಯರು, ಗೌರವ ಸಲಹೆಗಾರರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here