Home ಧಾರ್ಮಿಕ ಸುದ್ದಿ ನಾಗಸನ್ನಿಧಿ ದರ್ಶನ ಸೇವೆ, ಸೀಯಾಳ ಅಭಿಷೇಕ

ನಾಗಸನ್ನಿಧಿ ದರ್ಶನ ಸೇವೆ, ಸೀಯಾಳ ಅಭಿಷೇಕ

947
0
SHARE

ಉಡುಪಿ : ಉಡುಪಿಯ ಕಿದಿಯೂರು ಹೊಟೇಲ್‌ನ ನಾಗಸನ್ನಿಧಿಯ 32ನೇ ವಾರ್ಷಿಕೋತ್ಸವ ಪ್ರಯುಕ್ತ ನಾಗರಪಂಚಮಿಯಂದು ಬೆಳಗ್ಗೆ ವಿದ್ವಾನ್‌ ಕಬಿಯಾಡಿ ಜಯರಾಮ ಆಚಾರ್ಯ ಅವರ ನೇತೃತ್ವದಲ್ಲಿ ಶ್ರೀ ನಾಗದೇವರಿಗೆ ಕ್ಷೀರ, ನಾಳೀಕೇರ, ಪಂಚಾಮೃತಾದಿ ಅಭಿಷೇಕಗಳೊಂದಿಗೆ ಪ್ರಸನ್ನಪೂಜೆ ಜರಗಿತು. ವೇ|ಮೂ| ಬ್ರಹ್ಮಶ್ರೀ ಬೆಳ್ಳರ್ಪಾಡಿ ರಮಾನಂದ ಭಟ್ಟರಿಂದ ನಾಗದರ್ಶನ ಸೇವೆ ನಡೆಯಿತು. ಸಾವಿರಕ್ಕೂ ಅಧಿಕ ಸೀಯಾಳ, 600 ಲೀ. ಹಾಲನ್ನು ಶ್ರೀ ನಾಗದೇವರಿಗೆ ಸಮರ್ಪಿಸಲಾಯಿತು. ಕಿದಿಯೂರು ಹೊಟೇಲ್‌ನ ಎಂಡಿ ಭುವನೇಂದ್ರ ಕಿದಿಯೂರು, ನಿರ್ದೇಶಕರಾದ ಹೀರಾ ಬಿ. ಕಿದಿಯೂರು, ಜಿತೇಶ್‌ ಬಿ. ಕಿದಿಯೂರು, ಡಾ| ಜಿ. ಶಂಕರ್‌, ಮಂಜುನಾಥ್‌, ರಮೇಶ್‌ ಕಾಂಚನ್‌, ಗಣೇಶ್‌ ರಾವ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here