ಸುಬ್ರಹ್ಮಣ್ಯಗೆ ನಮೋ ಎನ್ನಿ…..ತೇರನ್ನು ಎಳೆಯೋಣ ಬನ್ನಿ ಚಂಪಾಷಷ್ಠಿ ಮಹೋತ್ಸವ ಸಡಗರ ಸವಿಯೋಣ ಬನ್ನಿ.
ಧರ್ಮಶ್ರದ್ಧೆಯ ತವರು ನೆಲ. ಕೃಷಿಕರು, ಉದ್ಯಮಿಗಳು, ವರ್ತಕರು ನೆಲೆಸಿರುವ ಪರಶುರಾಮ ಸƒಷ್ಟಿಯ ಈ ನೆಲದಲ್ಲಿ ದೆ„ವ ದೇವರುಗಳಿಗೆ ವಿಶೇಷ ಗೌರವ ಮತ್ತು ಆರಾಧನೆಗಳು ನಡೆಯುತ್ತವೆ. ಅಂತಹ ಸಪ್ತ ಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವೂ ವಿಶ್ವ ಪ್ರಖ್ಯಾತಿ ಪಡೆದಿದೆ. ಪುರಾಣ ಪ್ರಸಿದ್ಧ ಹಿನ್ನಲೆಯಿಂದ ಸರ್ವಧರ್ಮಿಯರನ್ನು ಕೈ ಬೀಸಿ ಕರೆಯುತ್ತಿರುವ ಶ್ರದ್ಧೆ ಭಕ್ತಿಯ ಪುಣ್ಯ ಭೂಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ನಾಗಸಂಕುಲ ಇಲ್ಲಿ ಹರಿದಾಡುತ್ತಿದೆ ಎಂಬ ನಂಬಿಕೆಯಿಂದ ಕರ್ಮ ದೋಷಗಳ ಪರಿಹಾರಕ್ಕೆಂದು ಕ್ಷೇತ್ರಕ್ಕೆ ಧಾವಿಸಿ ಬರುವ ಭಕ್ತರು ಸಹಸ್ರಾರು. ದೇಶದ ಮೂಲೆ-ಮೂಲೆಗಳಿಂದ ಆಕರ್ಷಣೆಯ ಮೂಲಕ ಕರೆಯುತ್ತಿರುವ ಇಲ್ಲಿ ನಿತ್ಯವೂ ಜನಜಾತ್ರೆ.
ಶಿಷ್ಟ-ಜಾನಪದ ಸಂಸ್ಕೃತಿಗಳು ಸಂತುಲನಗೊಂಡು ನೇಪುìಗೊಂಡ ತುಳುನಾಡಿನ ಧಾರ್ಮಿಕ ಸಾಂಸ್ಕೃತಿಕ ಹಿನ್ನಲೆಯುಳ್ಳ ಮಣ್ಣಿನ ಮೂಲ ಆರಾಧನೆಗೆ ವೈದಿಕ ಮೆರುಗನ್ನು ನೀಡಿದ ನಾಗ-ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿ.12 ಮತ್ತು 13ರಂದು ಸುಬ್ರಹ್ಮಣ್ಯ ಷಷ್ಠಿ-ಚಂಪಾಷಷ್ಠಿ ಎಂಬ ಅತ್ಯಾಕರ್ಷಕ ನೋಟದ ಗೌಜು-ಗದ್ದಲಗಳ ಸಂಭ್ರಮದ ಶ್ರದ್ಧೆ, ಭಾವ ಪರ್ವದ ಹಬ್ಬ. ನಾಡಿನ ದೊಡ್ಡ ತೇರಾದ ಬ್ರಹ್ಮರಥ ವನ್ನು ಬೆತ್ತ ಬಿದಿರುಗಳಿಂದ ಕಟ್ಟಿ ಶƒಂಗರಿಸಿ ಎಳೆಯುವುದು ವಿಶೇಷವಾಗಿದೆ.
ವೈದಿಕ-ಅವೈದಿಕ ಮಿಲನದ ಸವಿಯನ್ನು ಕಾಣುವ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಮಹೋತ್ಸವ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಚಾಂದ್ರಮಾನ ಪದ್ಧತಿಗೆ ಅನುಸಾರವಾಗಿ ಇಲ್ಲಿ ಜಾತ್ರೆ ನಡೆಯುತ್ತದೆ. ಶ್ರೀ ದೇವರ ಉತ್ಸವ ಮೂರ್ತಿಯ ಉತ್ಸವದ ಜತೆಗೆ ಕ್ಷೇತ್ರದ ದೆ„ವಗಳಾದ ಹೊಸಳಿಗಮ್ಮ, ಕಾಟುಕಾಮಂಚು ದೆ„ವಗಳಿಗೆ ನೇಮ, ಗೋಪುರ, ನಡಾವಳಿ ನಡೆಯುವುದು ದೆ„ವ ದೇವರುಗಳ ಸಮಾಗಮವನ್ನು ಪ್ರಚುರಪಡಿಸುತ್ತಿದೆ.
ಮಳೆ-ಬೆಳೆಯ ಪ್ರಾಪ್ತಿಗಾಗಿ, ಆರೋಗ್ಯ, ಐಶ್ವರ್ಯ ಅಭಿವೃದ್ಧಿಗಾಗಿ, ರೋಗ-ರುಜಿನ ಮುಕ್ತಿಗಾಗಿ, ವಿವಾಹ, ಸಂತಾನ ವೃದ್ಧಿಗಾಗಿ, ಚರ್ಮರೋಗ ನಿವಾರಣೆಗಾಗಿ ಕುಮಾರಧಾರ ತೀರ್ಥ ಸ್ನಾನ ಮಾಡಿ ನಾಗಸಂಕುಲ ಹರಿದಾಡುವ ಪುಣ್ಯ ಭೂಮಿಯಲ್ಲಿ ವಿವಿಧ ಬಗೆಯ ಉರುಳು ಸೇವೆ, ಆಶ್ಲೇಷಬಲಿ, ನಾಗಪ್ರತಿಷ್ಟೆ, ಸರ್ಪಸಂಸ್ಕಾರ, ತುಲಾಭಾರ, ಪ್ರಾರ್ಥನೆ ಇತ್ಯಾದಿ ಹರಕೆ ಹೊತ್ತು ಜಾತಿ-ಧರ್ಮ-ಪಂಥ ಭೇದ-ಭಾವವಿಲ್ಲದೆ ಇಲ್ಲಿ ನಡೆಯುವ ನಾಗ-ಸುಬ್ರಹ್ಮಣ್ಯನ ಸೇವೆಯಲ್ಲಿ ಅಪಾರ ಭಕ್ತ ಸಂಕುಲ ಪಾಲ್ಗೊಂಡು ಕೃತಾರ್ಥರಾಗುವರು.
ಅಲಂಕೃತ ಪಲ್ಲಕ್ಕಿಯಲ್ಲಿ
ಶ್ರೀ ದೇವರ ಉತ್ಸವ ಮೂರ್ತಿಯನ್ನಿರಿಸಿ, ದೇಗುಲದ ಒಳಾಂಗಣದಲ್ಲಿ ವಾದ್ಯ, ದೇವರನಾಮ, ಸಂಗೀತಾ, ವೇದಘೋಷ, ಚೆಂಡೆವಾದನ, ಮೊದಲಾದವುಗಳ ನಾದದಿಂದ ಪ್ರದಕ್ಷಿಣೆ ಬಂದ ನಂತರ ಅರ್ಚಕರು, ಉತ್ಸವ ಮೂರ್ತಿಯನ್ನು ನೇರವಾಗಿ ರಥದಲ್ಲಿರಿಸುವರು. ನಾಡಿನ ಹಲವು ದೇವಸ್ಥಾನಗಳ್ಲಲಿ ಉತ್ಸವ ಮೂರ್ತಿಯನ್ನು ವೈದಿಕರು ತಲೆಯ ಮೇಲಿರಿಸಿ ದರ್ಶನ ಬಲಿ ನಡೆಸಿ ನಂತರ ಉತ್ಸವಮೂರ್ತಿಯ ರಥಾರೋಹಣ ಮಾಡುವ ಸಂಪ್ರದಾಯವಿದೆ. ಆದರೆ ಇಲ್ಲಿ ಪ್ರತಿವರ್ಷ ವರ್ಷಾವಈಜಿ ಮಹೋತ್ಸವವು ಕಾರ್ತಿಕ ಬಹುಳ ದ್ವಾದಶಿ ಮೊದಲ್ಗೊಂಡು ಮಾರ್ಗಶಿರ ಶುದ್ಧ ಪೌರ್ಣಮಿ ಪರ್ಯಂತ ನಡೆಯುತ್ತದೆ. ಕಾರ್ತಿಕ ಬಹುಳ ಏಕಾದಶಿಯಂದು ಮೂಲ ದೇವರ ಗರ್ಭಗುಡಿಯ ಹುತ್ತದಿಂದ ತೆಗೆಯುವ ಮೂಲ ಮƒತ್ತಿಕಾ ಪ್ರಸಾದವು ಶ್ರೀ ಕ್ಷೇತ್ರದ ಮಹಾಪ್ರಸಾದ. ವರ್ಷಕ್ಕೊಮ್ಮೆ ತೆಗೆದು ವರ್ಷವಿಡೀ ನೀಡಲಾಗುತ್ತದೆ.
ಕೊಪ್ಪರಿಗೆ ಏರುವುದರೊಂದಿಗೆ ಜಾತ್ರೆಯ ಪ್ರಕ್ರಿಯೆ ಆರಂಭ. ಮುಂದಿನ ಹದಿನೈದು ದಿನಗಳಲ್ಲಿ ಕೊಪ್ಪರಿಗೆ ಅನ್ನ ಭಕ್ತರಿಗೆ ಮಹಾಪ್ರಸಾದ. ಮಾರ್ಗಶಿರ ಶುದ್ಧ ಚೌತಿಯಂದು ಶ್ರೀ ದೇವರಿಗೆ ಹೂವಿನ ತೇರಿನ ಉತ್ಸವ, ಪಂಚಮಿಯಂದು ಪಂಚಮಿ ರಥೋತ್ಸವ, ಷಷ್ಠಿಯಂದು ಮಹಾರಥೋತ್ಸವ-ಬ್ರಹ್ಮರಥೋತ್ಸವ,ಷಷ್ಠಿಯ ಮರುದಿನ ಕುಮಾರಧಾರಾ ಮತ್ಸŒÂತೀರ್ಥದಲ್ಲಿ ಶ್ರೀ ದೇವರ ಅವಭ್ರತೋತ್ಸವ, ನೌಕಾವಿಹಾರ ನಡೆಯುತ್ತದೆ. ದ್ವಾದಶಿಯಂದು ಜಾತ್ರೆ ಕೊನೆಗೊಳ್ಳುತ್ತದೆ. ದೇವಳದ ಒಳಾಂಗಣದಲ್ಲಿ ನೀರು ಬಂಡಿ ಉತ್ಸವ ಎಲ್ಲೂ ಕಂಡು ಬಾರದ ಅಪೂರ್ವ ಉತ್ಸವ.
ಕುಕ್ಕೇ ಜಾತ್ರೆಯು ಅತ್ಯಂತ ವಿಶಿಷ್ಟ ವಿಶೇಷ ಇಲ್ಲಿ ಉತ್ಸಾಹ ಇದೆ. ಸಂಭ್ರಮವಿದೆ ಅದರಲ್ಲೂ ಹೆಚ್ಚಿನದಾಗಿ ಭಕ್ತಭಾವತೆಗೆ ಹೆಚ್ಚಿನ ಒತ್ತಿದೆ. ದೇವರನ್ನು ಜಾತ್ರಾ ಸಮಯದಲ್ಲಿ ತಲೆಯಲ್ಲಿ ಹೊತ್ತು ಸಾಗುವುದಾದರೆ, ಇಲ್ಲಿ ಪಾಲಕಿಯಲ್ಲಿ ದೇವರನ್ನು ಕುಳ್ಳಿರಿಸಿ ಹೊತ್ತು ಸಾಗುವುದಕ್ಕೆ ನೋಡಲು ಪರಮಾನಂದ.
ಕಾರ್ತಿಕ ಬಹುಳ ಅಮಾವಾಸ್ಯೆ ದಿನ ಲಕ್ಷದೀಪೋತ್ಸವವು ಅನಂತರದ ಪಾಡ್ಯ, ಬಿದಿಗೆ, ತದಿಗೆ, ದಿನಗಳಲ್ಲಿ ಚಂದ್ರ ಮಂಡಲೋತ್ಸವ, ಅಶ್ವವಾಹನೋತ್ಸವ, ಮಯೂರ ವಾಹನೋತ್ಸವ, ಚೌತಿ ದಿನ ಹೂವಿನ ತೇರಿನ ಉತ್ಸವಗಳೂ, ಪಂಚಮಿ ದಿನ ರಾತ್ರಿ ಪಂಚಮಿ ರಥೋತ್ಸವವೂ, ಅನುಕ್ರಮವಾಗಿ ನಡೆಯುತ್ತವೆ. ಷಷ್ಠಿ ದಿನ ಬೆಳಗ್ಗೆ ಸುಮೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಉಮಾಮಹೇಶ್ವರ ದೇವರ ಸಮೇತವಾಗಿ ಉತ್ಸವ ಹೊರಟು ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮರಥದಲ್ಲಿಯೂ, ಉಮಾಮೇಶ್ವರ ದೇವರು ಪಂಚಮಿ ರಥದಲ್ಲಿಯೂ, ರಥಾರೋಹಣರಾಗುವರು. ಈ ಕ್ಷೇತ್ರಕ್ಕೆ ಯಾವಾಗಲೂ ದರುಶನವಿಲ್ಲದ ಗರುಡಪಕ್ಷಿಯು ಈ ರಥಾರೋಹಣಕಾಲದಲ್ಲಿಯೂ, ಮಾರನೆ ದಿನ ಅವಭƒತ ಮಹೋತ್ಸವ ಕಾಲದಲ್ಲಿಯೂ ದರ್ಶನವನ್ನು ಕೊಡುವುದು ಇಲ್ಲಿನ ಮಹಿಮಾತಿಶಯವನ್ನು ವ್ಯಕ್ತಪಡಿಸುತ್ತದೆ.
ಮಾರನೆ ದಿನವೂ ಇದೇ ರೀತಿ ಪೂರ್ವಾಹ್ನದಲ್ಲಿ ದೇವರ ಉತ್ಸವ ಹೊರಟು ಓಕುಳಿ ಪೂಜೆಯಾಗಿ ಮತ್ಸŒÂತೀರ್ಥಕ್ಕೆ ಅಂದರೆ ಕುಮಾರಧಾರ ಸ್ನಾನ ಘಟ್ಟಕ್ಕೆ ತೆರಳಿ ಅಲ್ಲಿ ನೌಕಾವಿಹಾರೋತ್ಸವವಾಗಿ ಅವಭƒತವಾಗುವುದು. ಈ ದಿನದ ಉತ್ಸವ ತೀರಿದ ಮೇಲೆ ನೆರೆದ ಜನಸಂದಣಿಯು ಕಮ್ಮಿ ಆಗುತ್ತ ಬರುತ್ತದೆ. ಆದರೂ ಉತ್ಸಹಗಳು ಮುಂದೆ ಪೌರ್ಣಮಿ ಪರ್ಯಂತವಾಗಿ ನಡೆದು ಆ ದಿವಸ ಮಹಾ ಸಂಪೊÅàಕ್ಷಣೆ ನಡೆದು ವರ್ಷಾವಧಿ ಉತ್ಸವವು ಕೊನೆಗಾಣುತ್ತದೆ.
ಗುರ್ಜಿಪೂಜೆ
ಲಕ್ಷದೀಪೋತ್ಸವದಂದು ಶ್ರೀ ಕ್ಷೇತ್ರದ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ತಳಿರು ತೋರಣಗಳಿಂದ,ಬಿಡಿಅಡಿಕೆಗಳಿಂದ ಅಲಂಕಾರಗೊಂಡ, ಹಿಂಗಾರ, ಎಳನೀರಗೊನೆ ಮತ್ತು ಬಾಳೆಗೊನೆ ಹಾಗೂ ಮಾವಿನತೋರಣಗಳಿಂದ ಶƒಂಗಾರಗೊಂಡ ಗಾಲಿಯಿಲ್ಲದ ರಥ ಗುರ್ಜಿಯಲ್ಲಿ ಮಯೂರ ವಾಹನಸುಬ್ರಹ್ಮಣ್ಯನಿಗೆ ವಿಶೇಷಪೂಜೆ ನಡೆಯುತ್ತದೆ.
ಚೌತಿ
ಹೂವಿನಿಂದ ಸಾಲಂಕೃತಗೊಂಡ ಹೂವಿನ ತೇರಿನ ಉತ್ಸವ ನೋಡುವುದೇ ಒಂದು ಭಾಗ್ಯ. ಹೂವಿನ ತೇರಿನಲ್ಲಿ ಕುಳಿತ ಕುಸುಮ ಹƒದಯದ ಕುಮಾರಸ್ವಾಮಿಯು ಭಕ್ತರ ಅಭಿಷ್ಠೆಗಳನ್ನು ಈಡೇರಿಸುವ ದೇವತೆ. ಈ ದಿನ ಉತ್ತರಾಧಿಮಠದಲ್ಲಿ ಮತ್ತು ಸವಾರಿ ಮಂಟಪದಲ್ಲಿ ಕಟ್ಟೆ ಪೂಜೆಗಳು ನಡೆಯುತ್ತದೆ.
ಪಂಚಮಿ
ಪಂಚಮಿಯಂದು ರಾತ್ರಿ ವಿವಿಧ ಸಂಗೀತ ವಾದ್ಯಗಳ ಅನೇಕ ನಾದಮಯ ಸುತ್ತುಗಳಲ್ಲಿ ತಲ್ಲೀನನಾದ ಕುಮಾರಸ್ವಾಮಿಯು ಪಂಚಮಿ ರಥದಲ್ಲಿ ವಿರಾಜಮಾನನಾಗುತ್ತಾನೆ. ಜಗಮಗಿಸುವ ವಿದ್ಯುತ್ ದೀಪದ ಅಲಂಕಾರದೊಂದಿಗೆ, ತಳಿರು ತೋರಣ, ಸೀಯಾಳ, ಅಡಿಕೆ, ಮುಂತಾದ ಫಲವಸ್ತುಗಳಿಂದ ಶƒಂಗಾರಗೊಂಡ ರಥದಲ್ಲಿ ಗಾಂಭೀರ್ಯದಿಂದ ಭಕ್ತ ಜನರ ನಡುವೆ ರಥೋತ್ಸವದ ನಡೆಯುತ್ತದೆ, ನಂತರ ತೆ„ಲಾಭ್ಯಂಜನ ನೆರವೇರುತ್ತದೆ.ಪಂಚಮಿಯಂದು ಆಕರ್ಷಕ ಸಿಡಿಮದ್ದು ಕುಕ್ಕೆ ಬೆಡಿ ಎನ್ನುವರು.
ಚಂಪಾಷಷ್ಠಿ
ಮಾರ್ಗಶಿರ ಶುದ್ಧ ಷಷ್ಠಿ ಚಂಪಾಷಷ್ಠಿ ದಿನ. ಶ್ರೀ ಸ್ವಾಮಿಯು ಸುಮುಹೂರ್ತದಲ್ಲಿ ಬ್ರಹ್ಮರಥಾರೋಹಣ ನಾಗುತ್ತಾನೆ. ಇದಕ್ಕಿಂತ ಮೊದಲು ಉಮಾಮಹೇಶ್ವರ ದೇವರು ಮತ್ತು ಸುಬ್ರಹ್ಮಣ್ಯ ದೇವರು ಒಂದೇ ಪಲ್ಲಕಿಯಲ್ಲಿ ಬಂದು, ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲೂ ವಿರಾಜಮಾನರಾಗುತ್ತಾರೆ. ಶ್ರೀ ದೇವರ ಬ್ರಹ್ಮರಥಾರೋಹಣವಾದ ನಂತರ ಸುವರ್ಣವೃಷ್ಠಿಯಾಗುತ್ತದೆ. ಈ ಸಂದರ್ಭದಲ್ಲಿ ಗರುಡನು ಬಂದು ಮೂರು ಪ್ರದಕ್ಷಿಣೆ ಹಾರುತ್ತಾನೆ ಎಂಬ ನಂಬಿಕೆ ಇದೆ.ಮೊದಲಿಗೆ ಪಂಚಮಿ ರಥವನ್ನು ಎಳೆದರೆ ನಂತರ ಶ್ರೀ ಸ್ವಾಮಿಯ ಚಂಪಾಷಷ್ಠಿ ಬ್ರಹ್ಮರಥೋತ್ಸವವು ಜರಗುತ್ತದೆ. ಭಕ್ತರು ತಮ್ಮ ಹರಕೆಯಂತೆ, ಕಾಳುಮೆಣಸು, ಹಣ ಮತ್ತು, ಏಲಕ್ಕಿ ಇತ್ಯಾದಿ ಧವಸಧಾನ್ಯಗಳನ್ನು ರಥಕ್ಕೆ ಎಸೆದು ಕೃತಾರ್ಥರಾಗುತ್ತಾರೆ. ಅನೇಕರು ರಥವನ್ನು ಎಳೆಯುವುದರ ಮೂಲಕ ಕೃತಾರ್ಥರಾಗುತ್ತಾರೆ.
ಅಪೂರ್ವ ಬೆತ್ತ
ಬ್ರಹ್ಮರಥ ಎಳೆದ ಬೆತ್ತವು ಅಪೂರ್ವ ಸ್ಥಾನ ಪಡೆದಿದೆ. ಈ ಬೆತ್ತವನ್ನು ಭಕ್ತರು ತುಂಡು ಮಾಡಿ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ. ಈ ಬೆತ್ತವನ್ನು ಮಹಾಪ್ರಸಾದದೊಂದಿಗೆ ನೀಡುವ ಕ್ರಮವೂ ಇದೆ.. ಇದು ಮನೆಯಲ್ಲಿದ್ದರೆ ಒಳಿತು ಮತ್ತು ಇದು ಔಷಧಕಾರಕ ಎಂಬ ನಂಬಿಕೆಯೂ ಇದೆ ನೌಕಾವಿಹಾರ ಮತ್ತು ಅವಭೃತೋತ್ಸವ ಪಾವನ ತೀರ್ಥ ಕುಮಾರಧಾರದಲ್ಲಿ ಕುಕ್ಕೇ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯುತ್ತದೆ.ಬೆಳಗ್ಗೆ ದೇಗುಲದ ದ್ವಾದಶೀ ಮಂಟಪದಲ್ಲಿ ಓಕುಳಿ ಪೂಜೆ ನಡೆದು, ನಂತರ ಓಕುಳಿ ಚೆಲ್ಲಾಟ, ದೇವರಿಗೆ ಓಕುಳಿ ಸಮರ್ಪಣೆ ತದನಂತರ ಭಕ್ತರು ಓಕುಳಿ ಪೊÅàಕ್ಷಣೆ ಮತ್ತು ಓಕುಳಿ ಚೆಲ್ಲಾಟ. ನಡೆದ ನಂತರ ದೇಗುಲದಿಂದ ಹೊರಟು ಬಿಲದ್ವಾರದ ಕಟ್ಟೆಯಲ್ಲಿ ಪೂಜೆ. ನಂತರ ಕುಮಾರಧಾರ ನದಿಯಲ್ಲಿ, ಮಾವು, ಬಾಳೆಗಳನ್ನೊಳಗೊಂಡು ತಳಿರು ತೋರಣ ಮತ್ತು ಹೂವುಗಳಿಂದ ಸಿಂಗರಿಸಲ್ಲಟ್ಟ ತೆಪ್ಪದಲ್ಲಿ ಶ್ರೀ ಸ್ವಾಮಿಯ ನೌಕಾವಿಹಾರ ನಡೆಯುತ್ತದೆ. ಅವಭೃತೋತ್ಸವದ ಬಳಿಕ ಕುಮಾರಧಾರ ನದಿತೀರದ ಕಟ್ಟೆಯಲ್ಲಿ ಪೂಜೆ ನೆರವೇರುತ್ತದೆ..ಅವಭƒತೋತ್ಸವ ಮುಗಿದ ಬಳಿಕ ದೇವಳದ ದ್ವಾದಶೀ ಮಂಟಪದಲ್ಲಿ ಪೂಜೆ ಮತ್ತು ಒಳಾಂಗಣದಲ್ಲಿ ಸಮಾಪನ ಪೂಜಾ ಕಾರ್ಯಕ್ರಮ ನೆರವೇರುತ್ತದೆ.
ಬೆತ್ತದಿಂದಲೇ ನಿರ್ಮಿಸಲ್ಪಡುವ ಬೇರೆಲ್ಲೂ ಕಾಣದ ಸುಂದರ ರಥ ಇಲ್ಲಿ ನಿರ್ಮಾಣವಾಗುತ್ತಿದೆ. ನಾಡಿನ ಕೆಲವೆಡೆ ಹಗ್ಗಗಳಿಂದ ತೇರು ನಿರ್ಮಾಣವಾದರೆ ಸುಬ್ರಹ್ಮಣ್ಯದಲ್ಲಿ ಮಾತ್ರ ವಿಶೇಷವಾದ ರೀತಿಯಲ್ಲಿ ಕುಮಾರಪರ್ವತದ ತಪ್ಪಲಿನ ಪರಿಸರದ ದಟ್ಟ ಆರಣ್ಯದಿಂದ ಆಯ್ದು ತಂದ ಬಿದಿರುಗಳಿಂದ ರಥದ ಅಟ್ಟೆ ಕಟ್ಟಿ ಹಗ್ಗವನ್ನು ಬಳಸದೆ ಬೆತ್ತದ ನಾರುಗಳಿಂದಲೇ ರಥವನ್ನು ಕಟ್ಟುತ್ತಾರೆ. ಈ ರಥದ ನಿರ್ಮಾಣ ಇಲ್ಲಿನ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದು.
ಜಾತ್ರೆಯ ಸೊಬಗಿನ ಮೆರುಗುಗಳು
ಕ್ಷೇತ್ರದ ಆನೆ ಯಶಸ್ವಿ
ದೇಗುಲದ ಆನೆ ಯಶಸ್ವಿ ದೇವರ ಎದುರು ತನ್ನ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ತನ್ನ ಕಾಲಿಗೆ ಕಟ್ಟಿದ ಕಾಲುಗೆಜ್ಜೆಗಳನ್ನು ಆಡಿಸುತ್ತಾ ನರ್ತಿಸುತ್ತಾ ತೆರಳುವುದು. ಸೊಂಡಿಲಲ್ಲಿ ಚಾಮರ ಹಿಡಿದು ಸಂಗೀತಕ್ಕೆ ನರ್ತಿಸುತ್ತಾ ಸಾಗುತ್ತದೆ. ನೌಕಾವಿಹಾರ ಮತ್ತು ಅವಭƒತೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಗಜರಾಣಿ ಯಶಸ್ವಿ ಎಲ್ಲರಂತೆ ತಾನೂ ಜಲಕ್ರೀಡೆಯಲ್ಲಿ ಸಂಭ್ರಮಿಸುವುದು ಕಣ್ಮನ ಸೆಳೆಯುತ್ತದೆ. ಅವಭೃತದಂದು ನದಿಯಲ್ಲಿ ಕ್ಷೇತ್ರದ ಆನೆ ಪುಟ್ಟ ಮಕ್ಕಳಂತೆ ತಾನೂ ಕೂಡಾ ನೀರಿನಲ್ಲಿ ಮುಳುಗೇಳುತ್ತಾ , ತನ್ನ ಸೊಂಡಿಲಿನಿಂದ ನೀರನ್ನು ಹಾರಿಸುತ್ತಾ, ನೀರಲ್ಲಿ ಲಾಗ ಹಾಕುತ್ತದೆ.
ಸಂಗೀತ ಪ್ರೀಯ ಸುಬ್ರಹ್ಮಣ್ಯ
ಕುಕ್ಕೇನಾಥನು ಸಂಗೀತ ಪ್ರೀಯ ಈತನ ಉತ್ಸವಗಳು ಯಾವಾಗಲೂ ಸಂಗೀತಮಯವಾಗಿರುತ್ತದೆ. ಶ್ರೀ ದೇವರ ಹೆಸರಿನಲ್ಲೇ ಅಸಂಖ್ಯಾಕ ಕೀರ್ತನೆಗಳು ಇರುತ್ತವೆ. ನಾದಸ್ವರ, ಡೋಲು, ತವಿಲ್ ಅಂದರೆ ಶ್ರೀ ಸ್ವಾಮಿಗೆ ತುಂಬಾ ಪ್ರೀಯವಾದುದು, ಇದಲ್ಲದೆ ಜಾತ್ರಾ ಸಮಯದಲ್ಲಿ ಸ್ಯಾಕ್ಸಪೋನ್, ಚೆಂಡೆ, ಬ್ಯಾಂಡ್, ಇತರ ವಾದ್ಯಗಳ ಅನೇಕ ಸುತ್ತುಗಳು ಭಕ್ತರನ್ನು ಭಾವ ಪರವಶರನ್ನಾಗಿಸುತ್ತದೆ.
ಬೀದಿ ಮಡೆಸ್ನಾನ :
ಚಂದ್ರಮಂಡಲ ರಥೋತ್ಸವವಾದ ಬಳಿಕ ಷಷ್ಠಿ ಬ್ರಹ್ಮರಥ ಎಳೆಯುವವರೆಗೆ ಭಕ್ತರು ಬೀದಿ ಮಡೆಸ್ನಾನ ಸೇವೆಯನ್ನು ಸಲ್ಲಿಸುತ್ತಾರೆ. ಅತ್ಯಂತ ಕಷ್ಟಕರವಾದ ಸೇವೆಗೆ ಅಪ್ರತಿಮ ಭಕ್ತಿ ಮತ್ತು ಅಲ್ಲದೆ ಸಾತ್ವಿಕ ಆಹಾರವನ್ನು ಸೇವಿಸಿ ವೃತಾಭಾರಿಗಳಾಗಿ ಕುಮಾರಧಾರ ನದಿಯಿಂದ ಬೀದಿಯಲ್ಲಿ ಉರುಳುತ್ತಾ ಬಂದು ಶ್ರೀ ದೇವರ ದರ್ಶನ ಮಾಡಿ ಉರುಳುತ್ತಾ ದರ್ಪಣತೀರ್ಥ ನದಿಯಲ್ಲಿ ಸ್ನಾನಮಾಡುವ ವಿಶೇಷ ಸೇವೆ ಇದರಲ್ಲಿ ಮಹಿಳೆಯರು, ಪುರುಷರು, ವೃದ್ಧರೂ, ಸ್ತ್ರೀಯರು, ಮಕ್ಕಳೂ ಬೇದಭಾವವಿಲ್ಲದೆ ಸೇವೆಯನ್ನು ನೆರವೇರಿಸುತ್ತಾರೆ. ಸರ್ಪಗಳು ಹರಿದಾಡುವ ಈ ಮಣ್ಣಿನಲ್ಲಿ ಉರುಳುವುದೂ ಪುಣ್ಯ ಎಂಬ ನಂಬಿಕೆ ಆಗಾಧವಾಗಿದೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರು
ಶ್ರೀ ದೇವಾಲಯವನ್ನು ಪ್ರವೇಶಿಸಲು ಮುಖ್ಯದ್ವಾರ ಪೂರ್ವಾಭಿ ಮುಖವಾಗಿರುವುದು. ಭಕ್ತರು ಪ್ರವೇಶಿಸಬೇಕಾದರೆ ಭಕ್ತರು ಹಿಂದಿನಿಂದ ಬಂದು ದೇವರ ದರ್ಶನ ಮಾಡಬಹುದಾಗಿದೆ. ಮುಖ್ಯದ್ವಾರದ ಎದುರಿಗೆ ಸುಬ್ರಹ್ಮಣ್ಯ ಸ್ವಾಮಿಯ ಗರ್ಭಗƒಹವಿರುವುದು. ಈ ಗರ್ಭಗƒಹ ಹಾಗೂ ಹೊಸದಾಗಿ ಕಟ್ಟಲ್ಪಟ್ಟ ಮುಖ ಮಂಟಪದ ಮಧ್ಯದಲ್ಲಿ ಗರುಡ ಕಂಬವು ಇರುವುದು ಒಳಗಿರುವ ವಾಸುಕಿಯ ಉಸಿರಾಟದ ವಿಷಜ್ವಾಲೆಯಿಂದ ಜನರಿಗೆ ವಿಷಭಯ ಉಂಟಾದ ದೆಸೆಯಿಂದ ಗರುಡಮಂತ್ರವನ್ನು ಮಂತ್ರಿಸಿ ಈ ಕಂಬವನ್ನು ಸ್ಥಾಪಿಸುವುದಾಗಿ ಹೇಳುತ್ತಾರೆ.
ಅನ್ನದಾನ ಪ್ರಭು ಸುಬ್ರಹ್ಮಣ್ಯ
ಶಂಕರಾಚಾರ್ಯರು ಭಜೇಕುಕ್ಕೆಲಿಂಗಂ ಎಂಬ ಶ್ಲೋಕದಲ್ಲಿ ಹೇಳಿರುವುದರಿಂದ ಆ ಕಾಲದಲ್ಲಿಯೇ ಇಲ್ಲಿನ ಅನ್ನದಾನ ಶ್ರೇಷ್ಠವಾಗಿತ್ತು ಎಂದು ತಿಳಿಯಬಹುದು. ಅದೂ ಅಲ್ಲದೆ ಈ ಕ್ಷೇತ್ರವು ಅನ್ನದಾನಕ್ಕೆ ಪ್ರಸಿದ್ಧ ಪಟ್ಟ ಸ್ಥಳವೆಂದು ವಿಷದಿಕರಿಸಲು ಇಲ್ಲಿ ಅಕ್ಷಯ ಪಾತ್ರ ಎಂಬ ಚಿನ್ನದ ಹೆಡೆಯುಳ್ಳ ಸಟ್ಟುಗ ಇದೆ. ಅಲ್ಲದೆ ಇಲ್ಲಿನ ಅನ್ನದಾನ ವಿಶೇಷತೆ ತಿಳಿದು ಮೈಸೂರಿನ ಮಹಾರಾಜರು ಚಂಪಾಷಷ್ಠಿ ಮಹೋತ್ಸವದ ಕಾಲದಲ್ಲಿ -ಬಾರಾಹಜಾರ್ ಸಂತರ್ಪಣೆ ಎಂಬ ಹೆಸರಿನಲ್ಲಿ 12,000 ಜನರಿಗೆ ದೇವರ ಸನ್ನಿಧಿಯಲ್ಲಿ ಸಂತರ್ಪಣೆ ನಡೆಸಲು ಬೇಕಾದ ಹಸಿರು ಕಾಣಿಕೆಯನ್ನು ಒಪ್ಪಿಸುತ್ತಿದ್ದರು.
ಸರ್ಪದೋಷ ನಿವಾರಕ ಕುಕ್ಕೇನಾಥ
ತಲೆ ತಲೆ ಮಾರಿನಲ್ಲಿ ಹಿರಿಯರು, ಕುಟುಂಬಸ್ಥರು, ಸ್ವತ: ಗೊತತಿದ್ದು ಗೊತ್ತಿಲ್ಲದೆ ಸರ್ಪದ ಹತ್ಯೆಗೆ ಕಾರಣವಾದರೆ ಅಂತಹ ಕುಟುಂಬಕ್ಕೆ ಸರ್ಪಹತ್ಯಾ ದೋಷ ಅಥವಾ ಸರ್ಪದೋಷ ಬಾದಿಸುತ್ತದೆ. ಈ ದೋಷದಿಂದಾಗಿ, ವಿವಾಹ, ಸಂತಾನಹೀನತೆ, ದೃಷ್ಠಿದೋಷ, ಚರ್ಮರೋಗ, ಸ್ಟಪ್ನದಲ್ಲಿ ಸರ್ಪದರ್ಶನ ಸರ್ಪಭಯ ಇತ್ಯಾದಿಗಳು ಬಾವಿಸಬಹುದು. ಆದ್ದರಿಂದ ಸರ್ಪದೋಷ ನಿವಾರಣೆಯಾಗುವ ಪೂಜೆ, ಸೇವೆಗಳಾದ, ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ನಾಗತಂಬಿಲ, ಮುಂತಾದುವುಗಳು ನಡೆಯುವುದು. ಈ ಸೇವೆಗಳಿಂದಾಗಿ ಸರ್ಪದೋಷ ನಿವಾರಣೆಯಾಗುತ್ತದೆ.ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಮತಬೇಧವಿಲ್ಲದೆ ಎಲ್ಲ ಜನ ಈ ಸೇವೆಗಳನ್ನು ನಡೆಸುತ್ತಾರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿತ್ತು ಅದೀಗ ಕಡಬ ತಾಲೂಕಿಗೆ ಸೇರಿದೆ. ಕುಮಾರಪರ್ವತದ ತಪ್ಪಲಿನ ಕುಮಾರಧಾರಾ ನದಿಯ ದಂಡೆಯಲ್ಲಿರುವ ಇದು ಪರಶುರಾಮ ಸƒಷ್ಟಿಯ ಸಪ್ತಕ್ಷೇತ್ರಗಳಲ್ಲಿ ಒಂದಾಗಿದೆ. ಸುಮಾರು ಐದು ಸಾವಿರ ವರ್ಷಗಳಷುÒ ಹಿಂದಿನಿಂದಲೂ ಪ್ರಸಿದ್ಧವಾದ ಈ ತೀರ್ಥಕ್ಷೇತ್ರಕ್ಕೆವಿದು. ಭಾರತದ ಎಲ್ಲ ಭಾಗಗಳಿಂದಲೂ ಭಕ್ತರು ದರ್ಶನಾರ್ಥಿಗಳಾಗಿ ಬರುತ್ತಾರೆ.
ಶ್ರೀ ಸ್ಕಂದ ಪುರಾಣದ ಕೌಮಾರಿಕಾಖಂಡ ಹಾಗೂ ಸಹ್ಯಾದ್ರಿ ಖಂಡಗಳಲ್ಲಿ ಈ ಕ್ಷೇತ್ರದ ಮಹಾತ್ಮೆಯು ಉಕ್ತವಾಗಿದೆ.