Home ಧಾರ್ಮಿಕ ಸುದ್ದಿ ನಾಗಮಂಡಲೋತ್ಸವ: ತೋರಣ,ಉಗ್ರಾಣ ಮಹೂರ್ತ

ನಾಗಮಂಡಲೋತ್ಸವ: ತೋರಣ,ಉಗ್ರಾಣ ಮಹೂರ್ತ

322
0
SHARE

ಕೆಂಜಾರು: ಪಣಂಬೂರು ತಣ್ಣೀರುಬಾವಿ ನಟ್ಟಿಲ್ಲು ಜತ್ತಿ ಪೂಜಾರಿ ಕರ್ಕೇರ ಕುಟುಂಬದ ಶ್ರೀ ನಾಗದೇವರು ಮತ್ತು ಶ್ರೀ ಜಾರಂದಾಯ ಬಂಟ ಪರಿವಾರ ದೈವಗಳ ಸೇವಾ ಟ್ರಸ್ಟ್‌ ಅಚಾರಿ ಬೆಟ್ಟು ವತಿಯಿಂದ ಎ. 20ರಂದು ಕೆಂಜಾರು ಅಚಾರಿಬೆಟ್ಟುನಲ್ಲಿ ನಡೆಯುವ ಶ್ರೀ ನಾಗದೇವರಿಗೆ ಚತುಃಪವಿತ್ರ ನಾಗ ಮಂಡಲೋತ್ಸವ ಸೇವೆಯ ಪ್ರಯುಕ್ತ ಬುಧವಾರದಂದು ಬ್ರಹ್ಮಶ್ರೀ ವೇದಮೂರ್ತಿ ಕಗ್ಗಿ ಗೋಪಾಲಕೃಷ್ಣ ಆಚಾರ್ಯ ಚಿತ್ರಾಪುರ ಹಾಗೂ ಬ್ರಹ್ಮಶ್ರೀ ಪಣಂಬೂರು ಪರಮೇಶ್ವರ ಐತಾಳ ಕಾಪಿಕಾಡು ಅವರ ನೇತೃತ್ವದಲ್ಲಿ ತೋರಣ ಹಾಗೂ ಉಗ್ರಾಣ ಮಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ಸೇವಾ ಟ್ರಸ್ಟ್‌ ನ ಅಧ್ಯಕ್ಷ ತುಕಾರಾಮ ಕಾವೂರು, ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ದೇವೇಂದ್ರ ಕೆ. ಕೃಷ್ಣಾಪುರ, ಆನುವಂಶಿಕ ಗುರಿಕಾರ ಮತ್ತು ಆಡಳಿತ ಮೊಕ್ತೇಸರ ಜಯಂತ ಪೂಜಾರಿ, ಬಜಪೆ, ಗೋಪಾಲ ಯಾನೆ ಜತ್ತಿ ಪೂಜಾರಿ ಪೇಜಾವರ, ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್‌ ಜೋಕಟ್ಟೆ, ಜತೆ ಕಾರ್ಯದರ್ಶಿ ಬಾಲಕೃಷ್ಣ ಕರ್ಕೇರ, ಅಶೋಕ್‌ ಕುಮಾರ್‌, ದಿವಾಕರ ಗೋಳಿದಡಿ, ಜಗನ್ನಾಥ ಪೆರಾರ, ಲೋಕೇಶ್‌, ಬಜಪೆ, ಶೇಖರ ಯು. ಪೂಜಾರಿ, ನಾಗಮಂಡಲ ಸೇವಾ ಸಮಿತಿ ಕಾರ್ಯದರ್ಶಿ ಜಯಂತ್‌ ವಿ. ಪೂಜಾರಿ, ಕೋಶಾಧಿಕಾರಿ ಉಮೇಶ್‌ ಕರ್ಕೇರ, ನಿತಿನ್‌ ಶೆಟ್ಟಿ ಚಿಕ್ಕಪರಾರಿ, ಸದಾನಂದ ರೈ ಚಿಕ್ಕಪರಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here