ಮಲ್ಪೆ,: ಇಲ್ಲಿನ ಬಾಪುತೋಟ ಗೋಳಿದಡಿ ನಾಗಬ್ರಹ್ಮಸ್ಥಾನದಲ್ಲಿ ಬಂಗೇರ ಕುಟುಂಬಸ್ಥರ ಚತುಃಪವಿತ್ರ ನಾಗಮಂಡಲ ಸೇವೆಯ ರವಿವಾರ ಜರಗಿತು.
ನಾಗಮಂಡಲೋತ್ಸವದ ಅಂಗವಾಗಿ ಬೆಳಗ್ಗೆ ಸನ್ನಿಧಿಯಲ್ಲಿ ಶ್ರೀ ನಾಗದೇವರಿಗೆ ಪ್ರಧಾನ ಹೋಮ, ಪಂಚಾಮೃತ ಪುರಸ್ಸರ, ಆಶ್ಲೇಷಾ ಬಲಿ, ನಾಗದರ್ಶನ ಸೇವೆ ನಡೆಯಿತು. ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದವನ್ನು ಸ್ವೀಕರಿಸಿದರು.
ಮಲ್ಪೆ ಲಕ್ಷ್ಮೀನಾರಾಯಣ ಸಾಮಗರ ನೇತೃತ್ವದಲ್ಲಿ ವೇ| ಮೂ| ಮುರಳೀಧರ ತಂತ್ರಿ ಹಾಗೂ ವಾಸ್ತುತಜ್ಞ ವೇ| ಮೂ| ಸುಬ್ರಹ್ಮಣ್ಯ ಭಟ್ರವರ ಪೌರೋಹಿತ್ಯದಲ್ಲಿ ದಿನವಿಡೀ ವೈದಿಕ ವಿಧಿವಿಧಾನಗಳು ಜರಗಿದವು. ರಾತ್ರಿ ಹಾಲಿಟ್ಟು ಸೇವೆ, ನಾಗದರ್ಶನಗಳು ನಡೆದವು.
ವೇ| ಮೂ| ಬ್ರಹ್ಮಶ್ರೀ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ, ಶ್ರೀ ಕ್ಷೇತ್ರ ಕಲ್ಲಂಗಳ, ನಾಗಕನ್ನಿಕೆಯಾಗಿ ಬಾಲಕೃಷ್ಣ ವೈದ್ಯ, ನಟರಾಜ ವೈದ್ಯ ಹಾಗೂ ಮದ್ದೂರು ಕೃಷ್ಣಪ್ರಸಾದ್ ವೈದ್ಯ ಮತ್ತು ಬಳಗ ಅವರ ಸಹಯೋಗದಲ್ಲಿ ನಡೆಯಿತು.
ನಾಗಬ್ರಹ್ಮಸ್ಥಾನದ ಅಧ್ಯಕ್ಷರು ಹಾಗೂ ಸದಸ್ಯರು, 15 ದೈವಸ್ಥಾನಗಳ ಕುಟುಂಬಸ್ಥರು ಸೇರಿದಂತೆ ಊರ ಪರವೂರ ಸಹಸ್ರಾರು ಭಕ್ತರು ಪುಣ್ಯ ಸೇವೆಯನ್ನು ಕಣ್ತುಂಬಿಕೊಂಡರು.