ಉಳ್ಳಾಲ, : ಶ್ರೀ ಶಾರದಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಉಳ್ಳಾಲದ ಶ್ರೀ ಶಾರದಾ ನಿಕೇತನದ ಆವರಣದಲ್ಲಿ ನೂತನವಾಗಿ ಶಿಲಾಮಯವಾಗಿ ನಿರ್ಮಿಸಿದ ನಾಗಬ್ರಹ್ಮಾದಿ ಪಂಚದೈವಿಕ ಸನ್ನಿಧಿಯಲ್ಲಿ ಇತ್ತೀಚೆಗೆ ಪುನಃಪ್ರತಿಷ್ಠೆ- ಬ್ರಹ್ಮಕಲಶೋತ್ಸವ ಹಾಗೂ ಆಶ್ಲೇಷಾ ಬಲಿ ಕಾರ್ಯಕ್ರಮ ಜರಗಿತು.
ಬ್ರ| ಶ್ರೀ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ಪ್ರಧಾನ ಆಚಾರ್ಯತ್ವದಲ್ಲಿ ವೈದಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ನಾಗಪಾತ್ರಿ ಬೆಳ್ಳರ್ಪಾಡಿ ರಮಾನಂದ ಭಟ್ಟರಿಂದ ನಾಗದರ್ಶನ ಹಾಗೂ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಊರ ಪರವೂರ ಧಾರ್ಮಿಕ ಕ್ಷೇತ್ರಗಳ ಪ್ರಮುಖರಲ್ಲದೆ ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸುದೇಶ್ ಮರೋಳಿ ಮತ್ತು ಸುಮಿತಾ ಎಸ್. ಮರೋಳಿ ವೈದಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಜೀಣೊರ್ದ್ಧಾರ ಸಮಿತಿಯ ಗೌರವಾಧ್ಯಕ್ಷ ಶ್ರೀಕರ ಕಿಣಿ, ಅಧ್ಯಕ್ಷ ಯು.ಎಸ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಹಾಗೂ ಕೋಶಾಧಿಕಾರಿ ವಿಜಯ ಉಳ್ಳಾಲ್, ಶಾರದಾ ಮಹಿಳಾ ವೇದಿಕೆಯ ಅಧ್ಯಕ್ಷೆ ರೇಣುಕಾ ಕಾಂಚನ್ ಉಪಸ್ಥಿತರಿದ್ದರು.