ಬನ್ನೂರು : ಇಲ್ಲಿನ ನಾಗಬಳ್ಳಿ ಶ್ರೀ ಕಲ್ಲುರ್ಟಿ ಚಾವಡಿಯ ವರ್ಷಾವಧಿ ಉತ್ಸವ ಇತೀಚೆಗೆ ನಡೆಯಿತು. ಕ್ಷೇತ್ರದಲ್ಲಿರುವ ಔದುಂಬರಾ ವೃಕ್ಷದ ಬುಡದಲ್ಲಿ ಗುರುದತ್ತ ಮಹಾಯಾಗ, ಸಂಜೆ ಕಲ್ಲುರ್ಟಿ ದೈವದ ತಂಬಿಲ ಸೇವೆ, ಹೂವಿನ ಸೇವೆ ಜರಗಿತು. ಹರೀಶ ಶಾಂತಿ ಪುತ್ತೂರು ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಕಲ್ಲುರ್ಟಿಗೆ 108 ಸೀಯಾಳ ಅಭಿಷೇಕ, ಲಕ್ಷ ಕೇಪುಳ ಅರ್ಚನೆ, ಅಲಂಕಾರ ಪೂಜೆ, ಹೂವಿನ ಪೂಜೆ, ತಂಬಿಲ ಸೇವೆ ನಡೆದು ಭಂಡಾರ ತೆಗೆದು ರಾತ್ರಿ ಕಾಲಾವಧಿ ನೇಮ, ಗಂಧ ಬೂಳ್ಯ, ಅಕ್ಷಯ ಕಾಣಿಕೆ ಜರಗಿತು. ಬಳಿಕ ಹರಕೆ ಕೋಲ ನಡೆಯಿತು. ಇದೇ ಸಂದರ್ಭ ಕಾಲಾವಧಿ ಸಾರ್ವಜನಿಕ ಅಗೇಲು ಸೇವೆ ನಡೆಯಿತು. ಸಾವಿರಾರು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಹೊಸ ಆಭರಣ ಸಮರ್ಪಣೆ
ಕಲ್ಲುರ್ಟಿ ದೈವದ ಭಂಡಾರಕ್ಕೆ ಸುಳ್ಯದ ಮಲ್ಲೇಶ್ ದಂಪತಿಯಿಂದ ಬೆಳ್ಳಿಯ ಸರ, ಪುತ್ತೂರಿನ ವಿನೋದ್ ರೈ ದಂಪತಿಯಿಂದ ಸೊಂಟ ಪಟ್ಟಿ, ಭಕ್ತಾದಿಗಳ ಪರವಾಗಿ ಚಿನ್ನದ ಮೂಗುತಿ, ಬಳೆಯನ್ನು ಭಂಡಾರಕ್ಕೆ ಅರ್ಪಿಸಲಾಯಿತು. ಕಾಂಚನ ಸಂಕಪ್ಪ ನಲಿಕೆ ದೈವ ನರ್ತಕರಾಗಿ, ಗಣೇಶ್ ಪೂಜಾರಿ ನಾೖಲ, ನಾಗೇಶ್ ಪೂಜಾರಿ ನಾೖಲ, ಸೋಮನಾಥ ಮೂಲ್ಯ ಮಿತ್ತೂರು ಪೂಜಾರಿಗಳಾಗಿ, ಪ್ರವೀಣ್ ಕುಂಜಾರು ಮತ್ತು ಸಹೋದರರಿಂದ ಕೊಂಬು, ಕಾಂಚನ ಆನಂದ ಮತ್ತು ಬಳಗದಿಂದ ನಾಗಸ್ವರ ವಾದ್ಯ, ದಿನೇಶ್ ಸೇರಿದಾರ ಮತ್ತು ಬಳಗದಿಂದ ಬ್ಯಾಂಡ್ ಸೇವೆ ಜರಗಿತು.