Home ಧಾರ್ಮಿಕ ಸುದ್ದಿ ನಾಗ ಕಲಿಯುಗದ ಪ್ರತ್ಯಕ್ಷ ದೇವರು: ಶೀರೂರು ಶ್ರೀ

ನಾಗ ಕಲಿಯುಗದ ಪ್ರತ್ಯಕ್ಷ ದೇವರು: ಶೀರೂರು ಶ್ರೀ

ನಂದಳಿಕೆ ತಪ್ಪರಿಗೆ ನಾಗಮಂಡಲ ವೇದಿಕೆಯಲ್ಲಿ ಧಾರ್ಮಿಕ ಸಭೆ

890
0
SHARE

ಬೆಳ್ಮಣ್‌ : ನಾಗದೇವರು ಕಲಿಯುಗದ ಪ್ರತ್ಯಕ್ಷ ದೇವರಾಗಿದ್ದು ಭೀತಿ ಹುಟ್ಟಿಸುವುದರ ಜತೆಗೆ ಅನುಗ್ರಹ ಮೂರ್ತಿಯಾಗಿ ಪ್ರೀತಿಯನ್ನೂ ಹುಟ್ಟಿಸಬಲ್ಲರು ಎಂದು ಉಡುಪಿ ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರು ಹೇಳಿದರು.

ಬುಧವಾರ ನಂದಳಿಕೆ ತಪ್ಪರಿಗೆ ತಾಂಟ್ರ ಮಜಲು ನಾಗಬನದಲ್ಲಿ ಅಮೆರಿಕದ ವೈದ್ಯ ಡಾ| ಕಾರ್ತಿಕ್‌ ಸಂಜೀವ ಶೆಟ್ಟಿ ಅವರ ಸೇವಾರೂಪದ ಚತುಃ ಪವಿತ್ರ ನಾಗ ಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ನಂದಳಿಕೆ ಚಾವಡಿ ಅರಮನೆ ಸುಹಾಸ್‌ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದು, ಬೆಳ್ಮಣ್‌ ದುರ್ಗಾಪರಮೇಶ್ವರೀ ದೇಗುಲದ ಆಡಳಿತ ಮೊಕ್ತೇಸರ ವಿಘ್ನೇಶ್‌ ಭಟ್‌ ಶುಭ ಹಾರೈಸಿದರು.

ನಾಗಪಾತ್ರಿ ಸುಬ್ರಹ್ಮಣ್ಯ ಮಧ್ಯಸ್ಥ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಉದ್ಯಮಿ ಮುನಿಯಾಲು ಉದಯ ಶೆಟ್ಟಿ, ನಂದಳಿಕೆ ಶ್ರೀ ಲಕ್ಷ್ಮೀಜನಾರ್ದನ ದೇಗುಲದ ಆಡಳಿತ ಮೊಕ್ತೇಸರ ಎನ್‌. ತುಕಾರಾಮ ಶೆಟ್ಟಿ, ಮುಂಬಯಿಯ ಉದ್ಯಮಿ ಕಾಪಿಕೆರೆ ಕೃಷ್ಣ ಶೆಟ್ಟಿ, ಮುಂಬಯಿ ಮೊಗವೀರ ಬ್ಯಾಂಕ್‌ನ ಉಪಾಧ್ಯಕ್ಷ ಸುರೇಶ್‌ ಕಾಂಚನ್‌, ಅದಾನಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ, ನಾರಾಯಣ ಭಟ್‌, ಡಾ| ಪ್ರಭಾಕರ ಶೆಟ್ಟಿ, ಡಾ| ಹರೀಶ್‌ ಶೆಟ್ಟಿ, ನಂದಳಿಕೆ ತಪ್ಪರಿಗೆ ವಜ್ರಾವತಿ ಸಂಜೀವ ಶೆಟ್ಟಿ, ಕೊಲಚೂರು ಗುತ್ತು ಬಿ.ಸಂಜೀವ ಶೆಟ್ಟಿ ಮತ್ತಿತರರಿದ್ದರು. ಬಿ. ನಾಗರಾಜ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ವಿ.ಕೆ. ರಾವ್‌ ಹಾಗೂ ಎನ್‌.ಎಂ. ಹೆಗ್ಡೆ ನಿರೂಪಿಸಿದರು. ಬೆಳಗ್ಗೆ ನಾಗಬನದಲ್ಲಿ ಕಲಶಾಭಿಷೇಕ, ನಾಗದರ್ಶನ ನಡೆದು ಮಧ್ಯಾಹ್ನ ಅನ್ನ
ಸಂತರ್ಪಣೆ ಜರಗಿತು.

LEAVE A REPLY

Please enter your comment!
Please enter your name here