ಸುಬ್ರಹ್ಮಣ್ಯ : ಬಿಳಿನೆಲೆ ಗ್ರಾಮದ ನಡುತೋಟದ ಶಿರಾಡಿ ದೈವದ ದೈವಸ್ಥಾನದಲ್ಲಿ ಶಿರಾಡಿ ದೈವ ಮತ್ತು ಪರಿವಾರ ದೈವಗಳ ನೇಮವು ಶ್ರದ್ಧೆ, ಭಕ್ತಿಯಿಂದ ನೆರವೇರಿತು.
ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಬಳಿಕ ಶಿರಾಡಿ ದೈವ ಮತ್ತು ಪರಿವಾರ ದೈವಗಳಿಗೆ ನೇಮ ನಡೆಯಿತು. ದೈವಗಳ ಪ್ರಧಾನ ಪೂಜಾರಿ ಚೆನ್ನಕೇಶವ ನಡುತೋಟ, ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪರಶುರಾಮ ಪಳ್ಳಿಗದ್ದೆ, ಗೌರವಾಧ್ಯಕ್ಷ ವೆಂಕಟ್ರಮಣ ಗೌಡ ಕಳಿಗೆ, ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ನಡುತೋಟ, ಕೋಶಾಧಿಕಾರಿ ನಾಗೇಶ ಕೈಕಂಬ, ಸಮಿತಿ ಸದಸ್ಯರಾದ ಪ್ರವೀಣ್ ಕುಮಾರ್ ಪಿಲಿಕಜೆ, ಯಶೋಧರ ಬಾಲಡ್ಕ, ರಾಮಚಂದ್ರ ಮಾಲೆಂಗ್ರಿ, ಶಿವಪ್ರಸಾದ್ ನಡುತೋಟ, ಲೀಲಾವತಿ ಕಳಿಗೆ ಉಪಸ್ಥಿತರಿದ್ದರು.