ಬಂಟ್ವಾಳ : ಶ್ರೀ ಉದ್ಭವ ರೌದ್ರನಾಥ ದೇವಸ್ಥಾನ ನಡುಬೊಟ್ಟು ಇದರ ನೂತನ ಧ್ವಜಸ್ತಂಭ ಪ್ರತಿಷ್ಟೆ ಮತ್ತು ಬ್ರಹ್ಮಕುಂಭಾಭಿಷೇಕದ ವೈದಿಕ, ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಎ. ಎ.15 ರಂದು ಹಸಿರು ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನ ವಠಾರದಿಂದ ನಡೆಯಿತು.
ಪೂರ್ವಾಹ್ನ 9.30ಕ್ಕೆ ಮಂಗಳೂರಿನ ಶ್ರೀ ಶರವು ಮಹಾಗಣಪತಿ ದೇವಸ್ಥಾನ “ಸ್ವರ್ಣ ಶಿಖರ’ ಮತ್ತು ದೇವಿಗೆ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಮುಖವಾಡ ಹಾಗೂ ದೇವರ ಪುಷ್ಪಕನ್ನಡಿಯೊಂದಿಗೆ ಹಸಿರು ಹೊರೆ ಕಾಣಿಕೆಯು ಚಾಲನೆಗೊಂಡಿತ್ತು.
ಮುಂಜಾನೆ 11ಗಂಟೆಗೆ ಮೆರವಣಿ ಗೆಯು ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನ ವಠಾರಕ್ಕೆ ತಲುಪಿದ್ದು, ಬಂಟ್ವಾಳ ತಾಲೂಕಿನ ಭಕ್ತಾದಿಗಳಿಂದ ಬೆಳ್ತಿಗೆ ಅಕ್ಕಿ, ತರಕಾರಿ, ತೆಂಗಿನಕಾಯಿ,ಸೀಯಾಳ, ಬಾಳೆಹಣ್ಣು, ಎಣ್ಣೆ, ಬೆಲ್ಲ ಇತ್ಯಾದಿಗಳನ್ನು ಸೇರಿಸಿಕೊಂಡು ದೊಡ್ಡ ಸಂಖ್ಯೆಯ ವಾಹನದಲ್ಲಿ ನಡುಬೊಟ್ಟು ಕ್ಷೇತ್ರಕ್ಕೆ ತೆರಳಿತು.
ನೂರಾರು ವಾಹನಗಳ ಮೆರವಣಿಗೆ ಯಲ್ಲಿ ಪಾಲ್ಗೊಂಡವರಿಗೆ ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಸಿರುವಾಣಿ ಹೊರೆಕಾಣಿಕೆಯಲ್ಲಿ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್,