Home ಧಾರ್ಮಿಕ ಸುದ್ದಿ ಮುತ್ತು ಮಾರಿಯಮ್ಮ ಜಾತ್ರೆ: ಆಮಂತ್ರಣ ಬಿಡುಗಡೆ

ಮುತ್ತು ಮಾರಿಯಮ್ಮ ಜಾತ್ರೆ: ಆಮಂತ್ರಣ ಬಿಡುಗಡೆ

1343
0
SHARE

ಬಡಗನ್ನೂರು: ಕಾವು ಮುತ್ತುಮಾರಿಯಮ್ಮ ದೇವಸ್ಥಾನ ಜಾತ್ರೆಯ ಅಮಂತ್ರಣ ಪತ್ರ ಬಿಡುಗಡೆ ಇತ್ತೀಚೆಗೆ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾವು ಪಂಚಲಿಂಗೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು ಅಮಂತ್ರಣ ಪತ್ರವನ್ನು ಬಿಡುಗಡೆ ಮಾಡಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾ.ಪಂ. ಉಪಾಧ್ಯಕ್ಷ ಲೋಕೇಶ್‌ ಚಾಕೋಟೆ, ಮುತ್ತು ಮಾರಿಯಮ್ಮ ದೇವಸ್ಥಾನ ಅಧ್ಯಕ್ಷ ಧರ್ಮಲಿಂಗಂ, ಗೌರವಾಧ್ಯಕ್ಷ ಲೋಕನಾಥ್‌, ಆಡಳಿತ ಮಂಡಳಿ ಸದಸ್ಯರು, ಮುತ್ತುಮಾರಿಯಮ್ಮ ಮಹಿಳಾ ಸಮಿತಿ ಕಾರ್ಯದರ್ಶಿ ಶ್ರೀರಂಜಿನಿ, ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here