ಸುಳ್ಯ : ಮುರುಳ್ಯ ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಬ್ರಹ್ಮಶ್ರೀ ವೇ|ಮೂ| ನೀಲೇಶ್ವರ ಕೆ.ಯು. ದಾಮೋದರ ತಂತ್ರಿ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ಕೆ. ಸೂರ್ಯನಾರಾಯಣ ಭಟ್ ಮತ್ತು ಪೂದೆ ಸುಬ್ರಹ್ಮಣ್ಯ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು.
ಸಾರ್ವಜನಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಮಹಾಪೂಜೆ ನಡೆಯಿತು. ಮರುದಿನ ಗಣಪತಿ ಹವನ, ಬಿಂಬಶುದ್ಧಿ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಶ್ರೀ ದೇವರ ಬಲಿ ಹೊರಟು ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ಸಂಪ್ರೋಕ್ಷಣೆ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಯಶ್ರೀ ಉದಯಕುಮಾರ್ ರೈ ಅವರಿಂದ ದಾನ ಶೂರ ಕರ್ಣ ಎಂಬ ಹರಿಕಥಾ ಕಾಲಕ್ಷೇಪ ನಡೆಯಿತು. ಬೆಳ್ಳಾರೆ ಯಕ್ಷರಂಗ ಮಕ್ಕಳ ತಂಡದಿಂದ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ ನಡೆಯಿತು.
ಸೇವಾ ಟ್ರಸ್ಟ್ ಅಧ್ಯಕ್ಷ ವಿಠಲ ರೈ ಪೋಳಾಜೆ, ಉಪಾಧ್ಯಕ್ಷರಾದ ಭಾಸ್ಕರ ಮುರುಳ್ಯ, ಕೇಶವ ಭಟ್ ಮಾನಸವನ, ಕಾರ್ಯದರ್ಶಿ ಜನಾರ್ದನ ಅಲೆಕ್ಕಾಡಿ, ಕೋಶಾಧಿಕಾರಿ ಡಾ| ಪಿ. ರಾಮಚಂದ್ರ ಭಟ್ ದೇವಸ್ಯ, ಸದಸ್ಯರಾದ ಕೆ.ವಿ. ಗಣಪಯ್ಯ ಆಲಾಜೆ, ಎಂ.ಬಿ. ವಸಂತಕುಮಾರ್, ಶ್ರೀಕರ ಆಚಾರ್ ಕಳತ್ತಜೆ, ಅನೂಪ್ ಬಿಳಿಮಲೆ, ಎ.ಚೆನ್ನಪ್ಪ ಗೌಡ ಆಲೇಕಿ, ಕುಶಾಲಪ್ಪ ಗೌಡ ಪೋಳಾಜೆ, ಪಿ. ಸುಂದರ ರೈ ಪೋಳಾಜೆ, ಬೆಳ್ಯಪ್ಪ ಗೌಡ ಗೋಳ್ತಿಲ, ಜಗದೀಶ ಹುದೇರಿ, ರಕ್ಷಿತ್ ರೈ ವೋಟೋಳಿ, ಬಿ. ರಾಮಕೃಷ್ಣ ಭಟ್ ಕಳತ್ತಜೆ, ಎಂ. ವಿಶ್ವನಾಥ ರೈ ಪೋನಡ್ಕ, ಶೇಷಪ್ಪ ಗೌಡ ಹುದೇರಿ, ಎನ್. ಸುಂದರ ಗೌಡ ನಡುಬೈಲು, ಎಂ. ಸೋಮಪ್ಪ ಗೌಡ ಮಾಲೆÂತ್ತಾರು, ಉತ್ಸವ ಸಮಿತಿ ಅಧ್ಯಕ್ಷ ಅಜ್ರಂಗಳ ದಿವಾಕರ ರೈ ಪೊಗ್ಗೊಳಿ, ಕಾರ್ಯದರ್ಶಿ ಉಮೇಶ ಅಲೇಕಿ, ಸಂಚಾಲಕರೈದ ಮುರಳೀಕೃಷ್ಣ, ಪ್ರಶಾಂತ್ ಮುರುಳ್ಯ, ವಿವಿಧ ಸಮಿತಿಯ ಪದಾಧಿಕಾರಿಗಳಾದ ದಿನೇಶ್ ಕುಮಾರ್ ಮುರುಳ್ಯ, ಅರ್ನಾಡಿ ಸುಬ್ರಹ್ಮಣ್ಯ ಭಟ್ ನೆಲ್ಯಾರ, ನಟ್ಟಿಹಿತ್ಲು ಸೀತಾರಾಮ ಗೌಡ, ತಿರುಮಲೇಶ್ವರಿ ಅಲೇಕಿ, ಚಂದ್ರಶೇಖರ ಗೌಡ ಬಾಳೆಹಿತ್ಲು, ಶೇಷಪ್ಪ ಗೌಡ ಅಲೆಕ್ಕಾಡಿ, ನೀಲಮ್ಮ ಹುದೇರಿ, ಬಿ.ರಾಮಕೃಷ್ಣ ಭಟ್ ಕಳತ್ತಜೆ ಉಪಸ್ಥಿತರಿದ್ದರು.