Home ಧಾರ್ಮಿಕ ಕಾರ್ಯಕ್ರಮ ಮುರುಳ್ಯ: ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೆ

ಮುರುಳ್ಯ: ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೆ

1067
0
SHARE
ಜಾತ್ರೆಯ ಅಂಗವಾಗಿ ಶ್ರೀ ದೇವರ ದರ್ಶನ ಬಲಿ ನಡೆಯಿತು.

ಬೆಳ್ಳಾರೆ: ಮುರುಳ್ಯ ಗ್ರಾಮದ ದೇವರಕಾನ ಶ್ರೀ ಲಕ್ಷ್ಮೀನೃಸಿಂಹ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೆ ಬ್ರಹ್ಮಶ್ರೀ ವೇ|ಮೂ| ನೀಲೇಶ್ವರ ಕೆ.ಎಂ. ದಾಮೋದರ ತಂತ್ರಿ ನೇತೃತ್ವದಲ್ಲಿ ನಡೆಯಿತು.

ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ರವಿವಾರ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹಶುದ್ಧಿ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಸೋಮವಾರ ಬೆಳಗ್ಗೆ ಗಣಪತಿಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಕಲಾಭಿಷೇಕ, ಮಹಾಪೂಜೆ ಬಳಿಕ ದೇವರ ಬಲಿ ಹೊರಟು ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂಗಳಾರತಿ, ಮಂತ್ರಾಕ್ಷತೆ, ಸಂಪ್ರೋಕ್ಷತೆ, ತೀರ್ಥಪ್ರಸಾದ, ಅನ್ನ ಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಜನೆ, ಬೆಳ್ಳಾರೆ ಶ್ರೀ ದುರ್ಗಾ ನೃತ್ಯಕಲಾ ತಂಡದಿಂದ ನೃತ್ಯ ವೈಭವ ನಡೆಯಿತು. ರಾತ್ರಿ ಹೇಮಾವತಿ ಕುರಿಯಾಜೆ ಭಾಗವತಿಕೆಯೊಂದಿಗೆ ಒಂದು ಗಂಟೆ ಯಕ್ಷಗಾನ ಬಳಿಕ ಬೆಳ್ಳಾರೆಯ ಯಕ್ಷರಂಗದವರಿಂದ ವೀರಮಣಿ ಕಾಳಗ ಯಕ್ಷಗಾನ ಬಯಲಾಟ ನಡೆಯಿತು.

ದೇಗುಲದ ಪ್ರಧಾನ ಅರ್ಚಕ ವೇ|ಮೂ| ಕೆ. ಸೂರ್ಯನಾರಾಯಣ ಭಟ್, ಪೂದೆ ಸುಬ್ರಹ್ಮಣ್ಯ ಉಪಾಧ್ಯಾಯ, ಸೇವಾ ಟ್ರಸ್ಟ್‌ ಅಧ್ಯಕ್ಷ ಡಾ| ಪಿ.ಆರ್‌. ಭಟ್, ಕಾರ್ಯದರ್ಶಿ ಅನೂಪ್‌ ಬಿಳಿಮಲೆ, ಉಪಾಧ್ಯಕ್ಷ ಭಾಸ್ಕರ ಮುರುಳ್ಯ, ಕೇಶವ ಭಟ್ ಮಾನಸವನ, ಕೋಶಾಧಿಕಾರಿ ಜನಾರ್ದನ ಅಲೆಕ್ಕಾಡಿ, ಸದಸ್ಯರು, ಉತ್ಸವ ಸಮಿತಿ ಅಧ್ಯಕ್ಷ ದಿವಾಕರ ರೈ ಪೊಗ್ಗೊಲಿ, ಪದಾಧಿಕಾರಿಗಳು, ಉಪಸಮಿತಿ ಪದಾಧಿಕಾರಿಗಳು, ನೂರಾರು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here