ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಾಲಯದ ಶಿಲಾಮಯ ಗರ್ಭಗುಡಿಯ ಪುನರ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಎಪ್ರಿಲ್ 19ರಿಂದ 22ರ ವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರವನ್ನು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸೂರ್ಯ ನಾರಾಯಣ ಕುಡುಮತ್ತಾಯ ಬಿಡುಗಡೆಗೊಳಿಸಿದರು.
ಹೊರ ಜಿಲ್ಲೆಗಳಲ್ಲೂ ಭಕ್ತರನ್ನು ಹೊಂದಿರುವ ಕ್ಷೇತ್ರದಲ್ಲಿ ನಿತ್ಯ ಅನ್ನ ಸಂತರ್ಪಣೆ, ಸೇವಾ ರೂಪದ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಇದೀಗ ದೇವಾಲಯದ ಶಿಲಾಮಯ ಗರ್ಭಗುಡಿಯ ಕಾರ್ಯ ಪೂರ್ಣಗೊಂಡು ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.
ಕ್ಷೇತ್ರದ ಧರ್ಮದರ್ಶಿಗಳಾದ ಆನಂದ, ಟ್ರಸ್ಟ್ ಅಧ್ಯಕ್ಷೆ ಧರ್ಣಮ್ಮ, ಅಶ್ವತ್ಥ್, ಮುಂದಾಳುಗಳಾದ ಧರ್ಣಪ್ಪ ಗೌಡ ಅಂಡಿಲ, ತಿಮ್ಮಯ್ಯ ಗೌಡ ಪದುಮಜ, ಕೃಷ್ಣಯ್ಯ ಆಚಾರ್ಯ ನೂಜಿ, ವಿಶ್ವನಾಥ ಗೌಡ ಪುತ್ತಿಲ, ನಿರಂಜನ ಗೌಡ ನಡುಮಜಲು, ನಾರಾಯಣ ಗೌಡ ಮುಂಡೂರು, ಶ್ರೀಧರ ಕಂಬುಡಂಗೆ, ಬಾಲಕೃಷ್ಣ ಪಿಲಿಕುಡೇಲು, ದಿನೇಶ್ ಖಂಡಿಗ, ವೆಂಕಟರಮಣ ಬಾಳೆಹಿತ್ತಿಲು, ರಮೇಶ್ ಪೂಜಾರಿ ಮುಂಡೂರು, ಧನಂಜಯ ಪಿಲಿಕುಡೇಲು ಉಪಸ್ಥಿತರಿದ್ದರು.