Home ಧಾರ್ಮಿಕ ಸುದ್ದಿ ಮುಂಡೂರು ದುರ್ಗಾಪರಮೇಶ್ವರೀ ಕ್ಷೇತ್ರ: ಜಾತ್ರೆ

ಮುಂಡೂರು ದುರ್ಗಾಪರಮೇಶ್ವರೀ ಕ್ಷೇತ್ರ: ಜಾತ್ರೆ

947
0
SHARE

ಬೆಳ್ತಂಗಡಿ : ಮುಂಡೂರಿನ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಪ್ರತಿಷ್ಠಾ ವರ್ಧಂತಿ ಜಾತ್ರೆ ಸಂಪನ್ನ ಗೊಂಡಿತು.

ಗಣಪತಿ ಹೋಮ, ಚಂಡಿಕಾ ಹೋಮ, ಕಲಶಾಭಿಷೇಕಗಳ ಬಳಿಕ ದೇವರ ಬಲಿ ಉತ್ಸವ, ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.

ಮಹಾಪೂಜೆ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ರಂಗಪೂಜೆ, ಭಜನೆ ಕಾರ್ಯಕ್ರಮ ಜರಗಿತು.

ವೇ| ಮೂ| ಆಲಂಬಾಡಿ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕ ಅರವಿಂದ ಭಟ್ಟ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಚಾಮರಾಜ ಸೇಮಿತ, ಮುಂಡೂರು ರಮಾನಂದ ಸಾಲ್ಯಾನ್‌, ಸದಾನಂದ ನಾಯ್ಕ, ಪುಷ್ಪಾ ಶೆಟ್ಟಿ, ನೀತಾ ಮಹೇಶಕುಮಾರ್‌, ಜಗನ್ನಾಥ ಆಚಾರ್ಯ, ಎಂ.ಎಂ. ದಯಾಕರ ಭಟ್, ಚೌಕದಬೆಟ್ಟು ರಾಮ ಭಟ್, ಕೇಶವ ಕುಲಾಲ್, ರಾಜೀವ ಸಾಲ್ಯಾನ್‌ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here