Home ಧಾರ್ಮಿಕ ಸುದ್ದಿ ಮುಂಡಾಜೆ ಕ್ಷೇತ್ರ: ಅಷ್ಟಬಂಧ ಪ್ರತಿಷ್ಠೆ

ಮುಂಡಾಜೆ ಕ್ಷೇತ್ರ: ಅಷ್ಟಬಂಧ ಪ್ರತಿಷ್ಠೆ

545
0
SHARE

ಬೆಳ್ತಂಗಡಿ : ಮುಂಡಾಜೆ ಭಾರ್ಗವ ನಗರದ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ಕ್ಷೇತ್ರದ ಪುನಃ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ಬೆಳಗ್ಗೆ ನವಗ್ರಹ ಪ್ರತಿಷ್ಠೆ, ಅನ್ನಪೂರ್ಣೇಶ್ವರೀ ಪ್ರತಿಷ್ಠಾಪನೆ, ಶ್ರೀ ಪರಶುರಾಮ ದೇವರ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ ನೆರವೇರಿತು. ಮಧ್ಯಾಹ್ನ ಸ್ಥಳೀಯ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ- ಶ್ರೀ ಭಾರ್ಗವ ವಿಜಯ, ಸಂಜೆ ಕೀರ್ತನಾ ಭಜನ ತಂಡ ಮುಂಡಾಜೆ ಇವರಿಂದ ಭಜನೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಇಂದು ಬ್ರಹ್ಮಕಲಶಾಭಿಷೇಕ
ಎ. 20ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ನವಗ್ರಹ, ಗಣಪತಿ ದೇವರು, ಅನ್ನಪೂರ್ಣೇಶ್ವರಿಗೆ ಕಲಶಾಭಿ ಷೇಕಾದಿಗಳು, ಶ್ರೀ ಪರಶುರಾಮ ದೇವ ರಿಗೆ ಬ್ರಹ್ಮಕಲಶಾಭಿಷೇಕ ಜರಗಲಿದೆ.

ಬೆಳಗ್ಗೆ ಸಭಾ ಕಾರ್ಯಕ್ರಮದಲ್ಲಿ ಅಗ್ನಿಮಾನ್‌ ವೇ| ಮೂ| ತಲಾರೆ ವಾಮನ ಭಟ್‌ ಆಶೀರ್ವಚನ ನೀಡ ಲಿದ್ದು, ಬ್ರಹ್ಮಕಲಶೋ ತ್ಸವ ಸಮಿತಿ ಅಧ್ಯಕ್ಷ ನಿವೃತ್ತ ಮೇ| ಜ| ಎಂ. ವಿ. ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ಶ್ರೀ ಶಂಕರಜಯಂತಿ ಪ್ರಯುಕ್ತ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಮಹೇಶ್‌ ಕಾಕತ್ಕರ್‌ ಶೃಂಗೇರಿ ಉಪನ್ಯಾಸ ನೀಡಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್‌.ಎಸ್‌. ಗೋಖಲೆ ಅಧ್ಯಕ್ಷತೆ ವಹಿಸಲಿದ್ದು, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ತಾಳಮದ್ದಳೆ ಸುದರ್ಶನ ವಿಜಯ, ಉಜಿರೆಯ ಹೆಣ್ಣು ಮಕ್ಕಳ ತಂಡದಿಂದ ಪುರುಷೋತ್ತಮ ಶೆಟ್ಟಿ ಅಗರಿಯವರ ನೇತೃತ್ವದಲ್ಲಿ ಯಕ್ಷಾ ರಾಧನೆ, ಸಂಜೆ ಸರಿಗಮಪ ಖ್ಯಾತಿಯ ಅಭಿನವ ಭಟ್‌ ಮತ್ತು ವಿದುಷಿ ಅಂಜಲಿ ಸುಧೀರ್‌ ಮತ್ತು ವಿದುಷಿ ಆರಾಧನ ಫಡೆ ಇವರಿಂದ ಗಾನಾರ್ಪಣಮ್‌, ರಾತ್ರಿ ಕೀರ್ತನಾ ಕಲಾ ತಂಡ ಮುಂಡಾಜೆ ಇವರಿಂದ “ಮಾಲೆ ಸೇರಂದಿ ಮಲ್ಲಿಗೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here