Home ಧಾರ್ಮಿಕ ಸುದ್ದಿ ಮುಂಡಾಡಿ ಚಿತ್ತಾರಿ ಶ್ರೀ ದುರ್ಗಾಪರಮೇಶ್ವರಿ ದೇಗುಲ ಫೆ. 17-19: ಶತಚಂಡಿಕಾ ಯಾಗ, ಬ್ರಹ್ಮಕಲಶಾಭಿಷೇಕ

ಮುಂಡಾಡಿ ಚಿತ್ತಾರಿ ಶ್ರೀ ದುರ್ಗಾಪರಮೇಶ್ವರಿ ದೇಗುಲ ಫೆ. 17-19: ಶತಚಂಡಿಕಾ ಯಾಗ, ಬ್ರಹ್ಮಕಲಶಾಭಿಷೇಕ

1288
0
SHARE

ಉಡುಪಿ: ಕಾಡೂರು ಮುಂಡಾಡಿ ಚಿತ್ತಾರಿ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಫೆ. 17ರಿಂದ 19ರ ತನಕ ಶತಚಂಡಿಕಾ ಯಾಗ, ಬ್ರಹ್ಮಕಲಶಾಭಿಷೇಕ, ವಾರ್ಷಿಕ ವರ್ಧಂತ್ಯುತ್ಸವ, ನವಕ ಪ್ರಧಾನ, ಶ್ರೀರಂಗ ಪೂಜೆ, ಢಕ್ಕೆಬಲಿ, ಗೆಂಡೋತ್ಸವ, ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಫೆ. 16ರ ಬೆಳಗ್ಗೆ 8.30ರಿಂದ ಉಗ್ರಾಣ ಮುಹೂರ್ತ, ಹೊರೆಕಾಣಿಕೆ ಸ್ವೀಕಾರ, ನವಗ್ರಹ ಯಾಗ, ಫೆ. 17ರ ಬೆಳಗ್ಗೆ 7.34ರಿಂದ ನಾಗ ಸನ್ನಿಧಿಯಲ್ಲಿ ನವಕುಂಭ ಸ್ನಪನ, ಅನ್ನಸಂತರ್ಪಣೆ, ಅಪರಾಹ್ನ 2.30ರಿಂದ ಚಂಡಿಕಾ ಪುರಶ್ಚರಣೆ, ಸಂಜೆ 6ರಿಂದ ನಾಗದೇವರಿಗೆ ರಂಗ ಪೂಜಾದಿಗಳು, ಫೆ. 18ರ ಬೆಳಗ್ಗೆ 5ರಿಂದ ಶತಚಂಡಿಕಾ ಯಾಗ ಪ್ರಾರಂಭ, 11.30ಕ್ಕೆ ಮಹಾಪೂರ್ಣಾಹುತಿ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ.

ಅದೇ ದಿನ ಸಂಜೆ 6 ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಗಣ್ಯರನ್ನು ಸಮ್ಮಾನಿಸಲಾಗುವುದು. ಸಂಜೆ 7.30ರಿಂದ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಶ್ರೀರಂಗಪೂಜೆ, ಬಲಿ, ಹಾಲಿಟ್ಟು ಮಂಡಲೋತ್ಸವ, ಗೆಂಡಸೇವೆ, ಫೆ. 19ರಂದು ಮಹಾಸಂಪ್ರೋಕ್ಷಣೆ, ಹೂವಿನ ಪೂಜೆ, ತುಲಾಭಾರ ಸೇವೆ ಜರಗಲಿದೆ. ಪ್ರತಿದಿನ ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ.

LEAVE A REPLY

Please enter your comment!
Please enter your name here