Home ಧಾರ್ಮಿಕ ಸುದ್ದಿ ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ ಪಾರಾಯಣ

ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ ಪಾರಾಯಣ

778
0
SHARE

ಮುಳ್ಳೇರಿಯ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿ ಗಳವರ ಮಾರ್ಗದರ್ಶನದಲ್ಲಿ ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ ಪಾರಾಯಣ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ವನ್ನು ಮುಳ್ಳೇರಿಯ ಮಂಡಲ ಮಾತೃ ವಿಭಾಗದ ನೇತೃತ್ವದಲ್ಲಿ ಕುಂಬಳೆ ವಲಯ ಮಾತೃ ವಿಭಾಗದ ಆಶ್ರಯದಲ್ಲಿ ಶಾಂತಿಪಳ್ಳ ದಲ್ಲಿರುವ ಗುರುಮೂರ್ತಿ ಅವರ ನಿವಾಸ ‘ಅಭಿರಾಮ’ದಲ್ಲಿ ಪ್ರಾರಂಭ ಮಾಡಲಾಯಿತು.

ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ವಂದಿಸಿದರು. ಡಿ.ಪಿ. ಭಟ್, ಕೇಶವ ಪ್ರಸಾದ ಎಡಕ್ಕಾನ, ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮ, ವಲಯಮಾತೃ ವಿಭಾಗ ಕೃಷ್ಣ ಕುಮಾರಿ, ವಲಯ ಪದಾಧಿಕಾರಿಗಳು, ಗುರಿಕ್ಕಾರರು ಉಪಸ್ಥಿತರಿದ್ದರು

ಮಂಡಲ ಕಾರ್ಯದರ್ಶಿ ಬಾಲ ಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂಬಳೆ ವಲಯ ಶಾಂತಿಪಳ್ಳ ಘಟಕ ಗುರಿಕ್ಕಾರರಾದ ಗುರುಮೂರ್ತಿ ಇವರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here