ಮೂಲ್ಕಿ: ಇಲ್ಲಿನ ಪುತ್ರನ್ ಮೂಲಸ್ಥಾನದ ವಾರ್ಷಿಕ ಉತ್ಸವ ಹಾಗೂ ಶ್ರೀ ನಾಗದೇವರ ತನು- ತಂಬಿಲ ಸೇವೆ ಮತ್ತು ನಾಗ ದರ್ಶನ, ಹಾಲಾವಳಿ ತುಲಾಭಾರ ಸೇವೆ ಮತ್ತು ಸಪರಿವಾರ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ರಂಗಪೂಜೆ ಮತ್ತು ಪ್ರಸನ್ನ ಪೂಜೆ ಬುಧವಾರ ನಡೆಯಿತು.
ಶ್ರೀ ಕ್ಷೇತ್ರಪಾಲ, ನಂದಿಗೋಣ, ಮನೆ ಪಂಜುರ್ಲಿ, ಪಂಜುರ್ಲಿ, ಮೈಸಂದಾಯ, ಧೂಮಾವತಿ ಮತ್ತು ಬೊಬ್ಬರ್ಯ ದೈವಗಳ ದರ್ಶನ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಮೂಲಸ್ಥಾನದಲ್ಲಿ ನಡೆಯಿತು.
ವಾರ್ಷಿಕ ಮಹೋತ್ಸವ
ಮೇ 10ರಂದು ಆರಂಭಗೊಂಡು ಮೇ 15ರ ತನಕ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ತಂತ್ರಿಗಳಾದ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ನಡೆದ ಪುನರ್ ಪ್ರತಿಷ್ಠಾ, ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಹೋತ್ಸವದ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಮತ್ತು ಅವಿಭಜಿತ ದ.ಕ. ಜಿಲ್ಲೆಯ ಮೂಲಸ್ಥಾನದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.