ಮೂಲ್ಕಿ: ಮೂಲ್ಕಿಯ ಪುತ್ರನ್ ಮೂಲಸ್ಥಾನದಲ್ಲಿ ನಡೆಯುವ ಪುನಃಪ್ರತಿಷ್ಠಾ ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿ ಧಾರ್ಮಿಕ ಕಾಯರ್ಕ್ರಮಗಳು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಶನಿವಾರ ಜರಗಿದವು.
ಶ್ರೀ ನಾಗದೇವರಿಗೆ ಹಾಗೂ ಮೂಲಸ್ಥಾನದ ಶ್ರೀ ನಾಗಬ್ರಹ್ಮಲಿಂಗೇಶ್ವರ ಮತ್ತು ಶ್ರೀ ರಕ್ತೇಶ್ವರಿ ಸಾನ್ನಿಧ್ಯದಲ್ಲಿ ದೈವಗಳ ಬಿಂಬ ಶುದ್ಧಿ,ಬ್ರಹ್ಮ ಮಂಡಲ ರಚನೆ ಹಾಗೂ ಸಾಮೂಹಿಕ ಪ್ರಾರ್ಥನೆ ಮುಂತಾದ ಕಾರ್ಯಕ್ರಮಗಳು ನಡೆಯಿತು.
ಮೇ 12ರಂದು ಮೂಲಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು ಭಾಗವಹಿಸಿ ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡುವರು. ಬೆಳಗ್ಗೆ ಶ್ರೀ ನಾಗದೇವರು ಮತ್ತು ಪರಿವಾರ ದೇವರು ಮತ್ತು ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಶೇಕ ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರಗಲಿದೆ.