Home ಧಾರ್ಮಿಕ ಸುದ್ದಿ ಬಪ್ಪನಾಡು ದೇವಿಗೆ ಸ್ವರ್ಣ ಪಲ್ಲಕ್ಕಿ ಸಮರ್ಪಣೆ

ಬಪ್ಪನಾಡು ದೇವಿಗೆ ಸ್ವರ್ಣ ಪಲ್ಲಕ್ಕಿ ಸಮರ್ಪಣೆ

807
0
SHARE

ಮೂಲ್ಕಿ : ಒಂಬತ್ತು ಮಾಗ ಣೆಯ 32 ಗ್ರಾಮಗಳ ಭಕ್ತರ ಮೊದಲ ಆದ್ಯತೆಯ ಆರಾಧನಾ ಕೇಂದ್ರ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೀಮೆಯ ಭಕ್ತರ ಬಹುದಿನಗಳ ಅಪೇಕ್ಷೆಯ ಶ್ರೀ ಜಲ ದುರ್ಗೆ ಅಮ್ಮನವರಿಗೆ ಸುವರ್ಣ ಪಲ್ಲಕ್ಕಿ ಸಮರ್ಪಣೆ ಶುಕ್ರವಾರ ನಡೆಯಿತು.

ಶತಚಂಡಿಕಾ ಯಾಗ ಪೂರ್ಣಾಹುತಿಯ ಬಳಿಕ ದೇವರಿಗೆ ಮಹಾ ಪೂಜೆ ನಡೆದು ಬಲಿ ಉತ್ಸವ ಹಾಗೂ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಹೊರಾಂಗಣದಲ್ಲಿ ಉತ್ಸವ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆ ಹಾಗೂ ದಾನಿಗಳ ಸಮ್ಮಾನ ಇದೇ ಸಂದರ್ಭ ನಡೆಯಿತು. ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಬಪ್ಪನಾಡು ನಾರಾಯಣ ಶೆಟ್ಟಿ ಅವರ ಅಧ್ಯಕ್ಷತೆಯ ದೇವಸ್ಥಾನ ಅಭಿವೃದ್ಧಿ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯು ಮೂರು ವರ್ಷಗಳ ಕಾಲಾವಕಾಶವಿದ್ದರೂ ಎರಡೇ ವರ್ಷಗಳಲ್ಲಿ ದೇವಿಗೆ ಪಲ್ಲಕ್ಕಿಯನ್ನು ಅರ್ಪಿಸಿ ಭಕ್ತರ ಶ್ಲಾಘನೆಗೆ ಪಾತ್ರವಾಯಿತು.

ಸೀಮೆಯ ಅರಸರು ಹಾಗೂ ದೇವಳದ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಹಾಗೂ ಮತ್ತೋರ್ವ ಆನುವಂಶಿಕ ಮೊಕ್ತೇಸರ ಮತ್ತು ದೇವಸ್ಥಾನದ ಆಡಳಿತೆ ಮೊಕ್ತೇಸರ ಕಕ್ವ ಗುತ್ತಿನ ಪ್ರತಿನಿಧಿಯಾಗಿರುವ ಎನ್‌.ಎಸ್‌. ಮನೋಹರ ಶೆಟ್ಟಿ, ಸಮಿತಿಯ ಗೌರವಾಧ್ಯಕ್ಷರಾಗಿರುವ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ಅಭಯಚಂದ್ರ ಮತ್ತು ಅಮರನಾಥ ಶೆಟ್ಟಿ, ಪಾದೆಮನೆ ಜಯಂತ ರೈ, ಎಂ.ಎಚ್‌. ಅರವಿಂದ ಪೂಂಜ, ಕಾರ್ಯಾನಿರ್ವಹಣಾಧಿಕಾರಿ ಜಯಮ್ಮ, ಸಮಿತಿಯ ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ್‌ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಸುನೀಲ್‌ ಆಳ್ವ, ಉಪಾಧ್ಯಕ್ಷ ಬಾಳದ ಗುತ್ತು ಕರುಣಾಕರ ಶೆಟ್ಟಿ, ಕಟ್ಟದಂಗಡಿ ಹರಿಶ್ಚಂದ್ರ ವಿ. ಕೋಟ್ಯಾನ್‌ ಸ್ವರ್ಣ ಪಲ್ಲಕಿ ಸಮಿತಿಯ ಸಂಚಾಲಕ ಎಂ. ಅತುಲ್‌ ಕುಡ್ವ ನೇತೃತ್ವದಲ್ಲಿ ತಂತ್ರಿಗಳಾದ ಗೋಪಾಲಕೃಷ್ಣ ತಂತ್ರಿ, ಪವಿತ್ರಪಾಣಿ ಬೈಲುಮನೆ ವೆಂಕಟರಾಜ ಉಡುಪ ಹಾಗೂ ಪ್ರಧಾನ ಅರ್ಚಕರಾದ ಬಿ. ಕೃಷ್ಣದಾಸ್‌ ಭಟ್‌ ಮತ್ತು ಶ್ರೀಪತಿ ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here