Home ಧಾರ್ಮಿಕ ಸುದ್ದಿ ಮುಲ್ಕಾಡಿ :ಸಂಜೀವಿನಿ ಮೃತ್ಯುಂಜಯ ಮಹಾಯಾಗ

ಮುಲ್ಕಾಡಿ :ಸಂಜೀವಿನಿ ಮೃತ್ಯುಂಜಯ ಮಹಾಯಾಗ

619
0
SHARE

ಶಿರ್ವ: ಕೋಡು ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಬಂಧಪಟ್ಟ ಮುಲ್ಕಾಡಿ ಮುದ್ದಣ್ಣಕೆರೆ ನಾಗಬ್ರಹ್ಮಾದಿ ಪಂಚದೈವೀಕ ಸನ್ನಿಧಿಯಲ್ಲಿ ಕ್ಷೇತ್ರದ ತಂತ್ರಿಗಳಾದ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಅವರ ನೇತೃತ್ವದಲ್ಲಿ ಸಂಜೀವಿನಿ ಮೃತ್ಯುಂಜಯ ಮಹಾಯಾಗವು ರವಿವಾರ ನಡೆಯಿತು.

ಸುಮಾರು 400 ವರ್ಷಗಳ ಇತಿಹಾಸವಿರುವ ಪುರಾತನ ಮುದ್ದಣ್ಣಕೆರೆ ನಾಗಬ್ರಹ್ಮಾದಿ ಪಂಚದೈವೀಕ ಸನ್ನಿಧಿಯ ಜೀರ್ಣೋದ್ಧಾರದ ಸಲುವಾಗಿ ಸಾನ್ನಿಧ್ಯದಲ್ಲಿ ಕೇರಳದ ರೂಪೇಶ್‌ ಪೊದುವಾಳ್‌ ಅವರ ಉಪಸ್ಥಿತಿಯಲ್ಲಿ ತಾಂಬೂಲಾರೂಢ ಪ್ರಶ್ನೆ ನಡೆದಿತ್ತು. ಆ ಪ್ರಕಾರ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಅವರ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕ ಹರಿದಾಸ ಭಟ್‌ ಅವರ ಉಪಸ್ಥಿತಿಯಲ್ಲಿ ಮಹಾಗಣಯಾಗ, ನವಕ ಪ್ರಧಾನ ಹೋಮ, ಪಂಚಾಮೃತಾಭಿಷೇಕ, ಪ್ರಸನ್ನ ಪೂಜೆ ಮೊದಲಾದ ಧಾರ್ಮಿಕ ವಿಧಿವಿಧಾನಗಳು ವೇ|ಮೂ|ನಂದಿಕೂರು ಕೃಷ್ಣಮೂರ್ತಿ ಭಟ್‌, ಬೆಳ್ಳಿಬೆಟ್ಟು ಗಣೇಶ್‌ ಭಟ್‌ಅವರ ಪೌರೋಹಿತ್ಯದಲ್ಲಿ ನಡೆದು ಪೆರ್ಡೂರು ರಮಾನಂದ ಭಟ್‌ ಅವರಿಂದ ನಾಗಸಂದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ವೇ|ಮೂ| ಮುಲ್ಕಾಡಿ ಲೋಹಿತ್‌ ಭಟ್‌, ಮುಲ್ಕಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸದಾಶಿವ ಹೆಗ್ಡೆ, ಮೊಕ್ತೇಸರರಾದ ಕೆ.ಜಯಚಂದ್ರ ಹೆಗ್ಡೆ,ಕೆ. ಸುಧೀರ್‌ ಹೆಗ್ಡೆ, ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ, ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಮಹಾಬಲ ಬಳ್ಳಾಲ್‌, ಶಿರ್ವಕೋಡು ದಿನೇಶ್‌ ಹೆಗ್ಡೆ, ಮಂದಾರ ಮನೋಹರ ಶೆಟ್ಟಿ, ಕೋಡು ರವಿ ಹೆಗ್ಡೆ, ಕೋಡು ಸದಾನಂದ ಶೆಟ್ಟಿ, ಮನೋಹರ ಹೆಗ್ಡೆ,ಪಡುಮನೆ ಗುಣಪಾಲ ಶೆಟ್ಟಿ, ವಿಶ್ವನಾಥ ನಾಯಕ್‌, ಸಂತೋಷ್‌ ಶೆಟ್ಟಿ ಪಂಜಿಮಾರು,ನ್ಯಾರ್ಮ ಕುಶಲ ಶೆಟ್ಟಿ, ಸ್ಥಳವಂದಿಗರು, ಗ್ರಾಮಸ್ಥರು, ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here