Home ಧಾರ್ಮಿಕ ಕಾರ್ಯಕ್ರಮ ಮುಳಿಯಾರು : ದ್ರವ್ಯಕಲಶ ಮಹೋತ್ಸವ ಸಂಪನ್ನ

ಮುಳಿಯಾರು : ದ್ರವ್ಯಕಲಶ ಮಹೋತ್ಸವ ಸಂಪನ್ನ

1543
0
SHARE

ಮುಳಿಯಾರು: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ದ್ರವ್ಯಕಲಶ ಮಹೋತ್ಸವವು ವೇ|ಮೂ|ಬ್ರಹ್ಮಶ್ರೀ ಅರವತ್‌ ದಾಮೋದರನ್‌ ತಂತ್ರಿಯವರ ನೇತೃತ್ವದಲ್ಲಿ ಪಾರಂಪರ್ಯ ಆಡಳಿತ ಮೊಕ್ತೇಸರರಾದ ಯನ್‌.ಸುಬ್ರಾಯ ಬಳ್ಳುಳ್ಳಾಯರ ಮಾರ್ಗದರ್ಶನದಲ್ಲಿ ನಿರ್ವಿಘ್ನವಾಗಿ ಸಂಪನ್ನವಾಯಿತು. ಬ್ರಹ್ಮಶ್ರೀ ಅರವತ್‌ ಪದ್ಮನಾಭತಂತ್ರಿ ಅವರು ವೈದಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಬೆಳಗ್ಗೆ ಗಣಹೋಮವು ಜರಗಿ ದ್ರವ್ಯಕಲಶಾ ಭಿಷೇಕ ಸಾಂಗವಾಗಿ, ಶಾಸ್ತ್ರೀಯವಾಗಿ, ವೈದಿಕ ವಿಧಿ ವಿಧಾನಗಳೊಂದಿಗೆ ಜರಗಿದವು. ಉತ್ಸವದಂಗವಾಗಿ ಶ್ರೀ ಭೂತಬಲಿ, ರಾಜಾಂಗಣ ಪ್ರಸಾದ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಪ್ರಸಾದ ಭೋಜನವು ಜರಗಿತು.

ಸಂಜೆ ಜರಗಿದ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧಿಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ದಿವ್ಯಉಪಸ್ಥಿತರಿದ್ದು ಆಶೀರ್ವ ಚನವನ್ನಿತ್ತು ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಶ್ರೀ ಕ್ಷೇತ್ರ ಆಚಾರಗಳು, ಕ್ಷೇತ್ರ ಉತ್ಸವಗಳ ಪ್ರಾಧಾನ್ಯತೆ ಅನಿವಾರ್ಯತೆಗಳ ಬಗ್ಗೆ ಸಮಗ್ರ ಮಾಹಿತಿಗಳೊಂದಿಗೆ ಧಾರ್ಮಿಕ ಭಾಷಣ ಮಾಡಿದರು. ವಾಸುದೇವ ಭಟ್ ಉಪ್ಪಂಗಳ, ಟ್ರಸ್ಟಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಅಗಲ್ಪಾಡಿ, ನ್ಯಾಯವಾದಿ ದಾಮೋದರ ಮಣಿಯಾಣಿ ಮಿಂಚಿಪದವು, ಕೊಡವಂಜಿ ಕೋಲಾರು ಕುಟುಂಬ ಇವರು ಶುಭಾಶಂಸನ ಭಾಷಣ ಮಾಡಿದರು.

ವೇಣುಗೋಪಾಲ ತತ್ವಮಸಿ ಸ್ವಾಗತಿಸಿದರು. ಸೀತಾರಾಮ ಬಳ್ಳುಳ್ಳಾಯ ವಂದಿಸಿದರು. ಶ್ರೀ ಕ್ಷೇತ್ರ ಪ್ರಧಾನ ಅರ್ಚಕರಾದ ಅನಂತಪದ್ಮನಾಭ ಮಯ್ಯ ಅವರು ಪೂಜಾದಿ ವಿವಿಧ ವೈದಿಕ ಕಾರ್ಯಗಳಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here