Home ಧಾರ್ಮಿಕ ಸುದ್ದಿ   ಮುಗೇರು ದೇವಸ್ಥಾನ ಜಾತ್ರೆ ಹೊರೆಕಾಣಿಕೆ ಸಮರ್ಪಣೆ

  ಮುಗೇರು ದೇವಸ್ಥಾನ ಜಾತ್ರೆ ಹೊರೆಕಾಣಿಕೆ ಸಮರ್ಪಣೆ

533
0
SHARE

ಸವಣೂರು : ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 5ನೇ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೆ, ಪರಿವಾರ ದೈವಗಳ ಆರಾಧನಾ ಕೈಂಕರ್ಯಗಳು ಬ್ರಹ್ಮಶ್ರೀ ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ಮಾ. 26ರಂದು ನಡೆಯಲಿದ್ದು, ಮಾ. 25ರಂದು ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಬಳಿಕ ಭಕ್ತರು ಕ್ಷೇತ್ರದ ಸ್ವತ್ಛತೆ ಹಾಗೂ ಅಲಂಕಾರ ಸೇವೆ ಕೈಗೊಂಡರು. ಸಂಜೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಹೋಮ, ವಾಸ್ತು ಬಲಿ, ರಾತ್ರಿ ಪೂಜೆ ನಡೆಯಿತು.

ದೇವಸ್ಥಾನದ ಪವಿತ್ರಪಾಣಿ ರತ್ನಾಕರ ಕುಂಜತ್ತಾಯ, ಅರ್ಚಕ ಪದ್ಮನಾಭ ಕುಂಜತ್ತಾಯ ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಕಾರ್ಯದರ್ಶಿ ಶಿವಪ್ರಸಾದ್‌ ಶೆಟ್ಟಿ ಕಿನಾರ, ವ್ಯವಸ್ಥಾಪನ ಸಮಿತಿ ಸದಸ್ಯರಾದ ನವೀನ್‌ ಕುಮಾರ್‌ ಶೆಟ್ಟಿ, ರಾಕೇಶ್‌ ರೈ ಕೆಡೆಂಜಿ, ಮೋನಪ್ಪ ಗೌಡ ಆರೇಲ್ತಡಿ, ಆಶಾ ಪ್ರವೀಣ್‌ ಕಂಪ, ಶಿವರಾಮ ಗೌಡ ಮೆದು, ಪ್ರೇಮಾ ಆರೇಲ್ತಡಿ ಸಹಿತ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here