Home ಧಾರ್ಮಿಕ ಸುದ್ದಿ ಮೂಡುಬಿದಿರೆ: ಕಾಳಿಕಾಂಬಾ ದೇವಸ್ಥಾನದಲ್ಲಿ ಅವಭೃಥೋತ್ಸವ

ಮೂಡುಬಿದಿರೆ: ಕಾಳಿಕಾಂಬಾ ದೇವಸ್ಥಾನದಲ್ಲಿ ಅವಭೃಥೋತ್ಸವ

298
0
SHARE

ಮೂಡುಬಿದಿರೆ : ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ವರ್ಷಾವಧಿ ಮಹೋತ್ಸವದಂಗವಾಗಿ ರವಿವಾರ ಅವಭೃಥೋತ್ಸವ (ಓಕುಳಿ) ಜರಗಿತು.

ಬೆಳಗ್ಗೆ ಕವಾಟೋದ್ಘಾಟನೆಯಾಗಿ, ಗಣಪತಿ ಹೋಮ, ತುಲಾಭಾರ ಸೇವೆ, ಮಹಾಪೂಜೆ, ಉತ್ಸವ, ವಸಂತಮಂಟಪದಲ್ಲಿ ಅಷ್ಟಾವಧಾನ ಸೇವೆ ನಡೆದು ಬಳಿಕ ದೇವಸ್ಥಾನದಿಂದ ಪೇಟೆಯಾಗಿ ಪಲ್ಲಕಿಯಲ್ಲಿರಿಸಿದ ಉತ್ಸವ ಮೂರ್ತಿಯೊಂದಿಗೆ ಸಾಗಿ ಮೂಡುವೇಣುಪುರ ಶ್ರೀ ವೆಂಕಟ್ರಮಣ ದೇವಸ್ಥಾನದ ಕೆರೆಯಲ್ಲಿ ಅವಭೃಥ ವಿಧಿಗಳು ಜರಗಿದವು.

ಈ ಸಂದರ್ಭ ಸಾವಿರಾರಕ್ಕೂ ಅಧಿಕ ಭಕ್ತರು ಉಪಸ್ಥಿತರಿದ್ದರು. ಮಧ್ಯಾಹ್ನ ಸ್ತುತಿ ಎಸ್‌. ಪ್ರಭು ಬಳಗದವರಿಂದ ಸುಗಮ ಸಂಗೀತ ಮೊದಲಾದ ಕಾರ್ಯಕ್ರಮಗಳು ನಡೆದವು

LEAVE A REPLY

Please enter your comment!
Please enter your name here