ಮೂಡುಬಿದಿರೆ: ನಂಬಿಕೆಯ ನೆಲೆಗಟ್ಟಿನಲ್ಲಿ ಸಾಗಿದಾಗ ಸಂತೋಷದ ಬದುಕನ್ನು ಸಾಗಿಸಲು ಸಾಧ್ಯ. ಈ ನಂಬಿಕೆಗೆ ಧರ್ಮದ ಆಧಾರ ಬೇಕು. ಧರ್ಮಾನುಸರಣೆಯಿಂದ ನೆಮ್ಮದಿಯ ಬದುಕು ಸಾಧ್ಯ ಎಂದು ಶ್ರೀ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ನುಡಿದರು.
ಮಿಜಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರಡಿಯಲ್ಲಿ ಶುಕ್ರವಾರ ನಡೆದ ದೈವಗಳ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನವಿತ್ತರು.
ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ, ಆರ್ಕಿಟೆಕ್ಟ್ ನಾಗೇಶ್ ಹೆಗ್ಡೆ ಮಿಜಾರುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಂ. ಆನಂದ ಆಳ್ವ, ಮಿಜಾರುಗುತ್ತು, ಮೂಡುಬಿದಿರೆ ಚೌಟರ ಅರಮನೆ ಕುಲದೀಪ ಎಂ., ದೈವಸ್ಥಾನ ಮತ್ತು ಗರಡಿಯ ಗಡಿಕಾರ, ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ಯಾನೆ ಸುಬ್ಬಯ್ಯ ಭಂಡಾರಿ ಮಿಜಾರುಗುತ್ತು, ವೇ|ಮೂ| ಸುಬ್ರಹ್ಮಣ್ಯ ಪೆಜತ್ತಾಯ, ಮಿಜಾರುಗುತ್ತು ಶಂಕರ ರೈ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವರದರಾಜ ಹೆಗ್ಡೆ ಮಿಜಾರುಗುತ್ತು, ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಮಿಜಾರುಗುತ್ತು, ಮರಿಯಡ್ಕ ರಮೇಶ್ ಶೆಟ್ಟಿ ವೇದಿಕೆಯಲ್ಲಿದ್ದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ, ಮಂಗಳೂರು ಮಾಜಿ ಮೇಯರ್ ಶಶಿಧರ ಹೆಗ್ಡೆ ಮಿಜಾರುಗುತ್ತು ಸ್ವಾಗತಿಸಿದರು. ರಾಮಚಂದ್ರ ನಿರೂಪಿಸಿ ವಂದಿಸಿದರು.
ಮುಂಜಾನೆ ಗಣಪತಿ ಹೋಮ, ಧ್ವಜಸ್ತಂಭ ಪ್ರತಿಷ್ಠೆ, ಧರ್ಮದೈವಗಳ ಪ್ರತಿಷ್ಠೆ, ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ತುಡರ ಬಲಿ, ಪಲ್ಲ ಪೂಜೆಯಾಗಿ ಮಹಾಅನ್ನಸಂತರ್ಪಣೆ ನೆರವೇರಿತು.
ಸಮ್ಮಾನ: ಶಿಲ್ಪಿ ಕೆ. ಸತೀಶ ಆಚಾರ್ಯ, ಶಿಲ್ಪ ಗ್ರಾಮ ಕಾರ್ಕಳ, ಕಾಷ್ಠ ಶಿಲ್ಪಿ ವಿಶ್ವ ಆಚಾರ್ಯ ಎಡಪದವು, ನಿರ್ಮಾಣ ಕಾಮಗಾರಿಗಳನ್ನು ನಡೆಸಿಕೊಟ್ಟ ಕೇಶವ ಗೌಡ, ಆನಂದ ಮಂಗಳೂರು (ನರ್ತನ ಮಂಟಪ ವಿನ್ಯಾಸ), ರೋಹಿತ್ (ಪೈಂಟಿಂಗ್), ಶ್ರೀಧರ ಮಂಗಳೂರು (ತಾಮ್ರ ಹೊದೆಸುವಿಕೆ), ರಫೀಕ್ ಪಟ್ಟಾಡಿ (ಟೈಲ್ಸ್), ರೋಯಲ್ ಇಂಟರ್ಲಾಕ್ಸ್, ಅಶೋಕ್ (ಗೊಂಬೆಗಳಿಗೆ ಬಣ್ಣ), ಜಗದೀಶ ಸುವರ್ಣ, ಪ್ರಶಾಂತ್ ಶೆಟ್ಟಿ (ವಿದ್ಯುದೀಕರಣ), ಗ್ರಾ.ಪಂ. ಸದಸ್ಯ ಕರುಣಾಕರ ಶೆಟ್ಟಿ (ಪ್ಲಂಬಿಂಗ್) ಹಾಗೂ ವಿವಿಧ ಪರಿಚಾರಕ ವರ್ಗದವರನ್ನು, ಸೇವಾದಾರರನ್ನು ಸ್ವಾಮೀಜಿ ಸಮ್ಮಾನಿಸಿದರು.