ನಗರ : ಪುತ್ತೂರು ಧರ್ಮಸ್ಥಳ ಬಿಲ್ಡಿಂಗ್ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ ಶುಕ್ರವಾರ ಶ್ರೀ ಸರಸ್ವತಿ ಹವನದೊಂದಿಗೆ ಶೈಕ್ಷಣಿಕ ವರ್ಷದ ಚಟುವಟಿಕೆ ಆರಂಭಗೊಂಡಿತು.
ಬೆಳಗ್ಗೆ ಶ್ರೀ ಸರಸ್ವತಿ ಹವನ, ಗಣಹೋಮ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಸ್ಥೆಯ ಸಂಚಾಲಕ ಪಿ.ವಿ. ಗೋಕುಲ್ನಾಥ್, ಪ್ರಾಂಶುಪಾಲೆ ಹೇಮಲತಾ ಗೋಕುಲ್ನಾಥ್, ಉಪ ನ್ಯಾಸಕ, ಬೋಧಕೇತರ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಒಳಿತಿಗಾಗಿ ಪ್ರತಿ ವರ್ಷದಂತೆ ಸಂಸ್ಥೆಯಲ್ಲಿ ಈ ವರ್ಷವೂ ಶ್ರೀ ಸರಸ್ವತೀ ಹವನ ನಡೆಸಲಾಯಿತು. ಮಧ್ಯಾಹ್ನದ ಬಳಿಕ ಉಪನ್ಯಾಸಕರು ಪಠ್ಯ- ಪ್ರವಚನ ಪ್ರಾರಂಭಿಸುವ ಮೂಲಕ ಶೈಕ್ಷಣಿಕ ಚಟುಟಿಕೆಗೆ ಚಾಲನೆ ನೀಡಿದರು. ಉತ್ತಮ ಫಲಿತಾಂಶ ಪಡೆಯುವ ಉದ್ದೇಶದಿಂದ ಸಾಕಷ್ಟು ಮುಂಚಿತವಾಗಿಯೇ ಈ ಬಾರಿ ತರಗತಿ ಆರಂಭಗೊಂಡಿದೆ. ವಿಜ್ಞಾನ ವಿಭಾಗವೂ ಈ ವರ್ಷ ದಿಂದ ಆರಂಭಗೊಂಡಿದ್ದು, ದಾಖಲಾತಿ ನಡೆಯುತ್ತಿದೆ.