Home ಧಾರ್ಮಿಕ ಸುದ್ದಿ ಶ್ರೀ ಕೊಡಮಣಿತ್ತಾಯ ದೈವದ ನೇಮ

ಶ್ರೀ ಕೊಡಮಣಿತ್ತಾಯ ದೈವದ ನೇಮ

971
0
SHARE

ಪುಂಜಾಲಕಟ್ಟೆ : ಅಜ್ಜಿಬೆಟ್ಟು ಗ್ರಾಮದ ನೀಲಿ ಶ್ರೀ ವಿಷ್ಣುಮೂರ್ತಿ ಶ್ರೀ ಕೊಡಮಣಿತ್ತಾಯ, ಕಲ್ಕುಡ-ಕಲ್ಲುರ್ಟಿ, ಬ್ರಹ್ಮಬೈದರ್ಕಳ ಗರೋಡಿ ದೈವಸ್ಥಾನದಲ್ಲಿ ಕೊಡಮಣಿತ್ತಾಯ ದೈವದ ನೇಮ ಜ. 22ರಂದು ರಾತ್ರಿ ನಡೆಯಿತು.

ಪೆಜಕ್ಕಳ ಗಂಗಾಧರ ಕಕೃಣ್ಣಾಯ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಸಂಜೆ ಕೊಡಮಣಿತ್ತಾಯ ದೈವದ ಸೂಟೆದಾರ ನಡೆದು ಶ್ರೀ ಕೊಡ ಮಣಿತ್ತಾಯ ದೈವದ ನೇಮ, ಕಲ್ಕುಡ-ಕಲ್ಲುರ್ಟಿ ದೈವಗಳ ನೇಮ, ರಾತ್ರಿ ಹೂವಿನ ಪೂಜೆ, ಬ್ರಹ್ಮರ ಬಲಿ, ಕಡ್ಸಲೆ ಬಲಿ, ಬೈದರ್‌ಗಳ ಸಂಕ್ರಾಂತಿ ಸೇವೆ, ಸುರ್ಯ ಹಾಕುವುದು, ಅನ್ನಸಂತರ್ಪಣೆ ಜರಗಿತು.

ಮಾಜಿ ಸಚಿವ ಬಿ. ರಮಾನಾಥ ರೈ, ವಿಜಯ ಬ್ಯಾಂಕ್‌ ನಿವೃತ್ತ ಅಧಿಕಾರಿ ಬೇಬಿ ಕುಂದರ್‌, ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷ ಯತೀಶ್‌ ಶೆಟ್ಟಿ ವಿಜಯನಗರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ರಾಜೇಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್‌ ಗಟ್ಟಿ, ಜೀರ್ಣೋ ದ್ಧಾರ ಸಮಿತಿ ಗೌರವಾಧ್ಯಕ್ಷ ವಿನಾಯಕ ಪ್ರಭು, ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಉತ್ಸವ ಸಮಿತಿ ಗೌರವಾಧ್ಯಕ್ಷ ವೀರಪ್ಪ ಶೆಟ್ಟಿ ಕಂಚಾರು, ಅಧ್ಯಕ್ಷ ಕಾಂತಪ್ಪ ಶೆಟ್ಟಿ ಪಡ್ಲೊಟ್ಟು, ಕಾರ್ಯದರ್ಶಿ ಕೊರಗಪ್ಪ ಶೆಟ್ಟಿ ತಿರ್ಮಲೊಟ್ಟು, ಧ್ವಜಸ್ತಂಭ ನಿರ್ಮಾಣ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಕಾರ್ಯ ದರ್ಶಿ ಮಾಧವ ಪೂಜಾರಿ ಕುಲ್ಲಾಲ್‌, ಮುಂಬೈ ಸಮಿತಿ ಅಧ್ಯಕ್ಷ ಗಣೇಶ್‌ ಶೆಟ್ಟಿ, ಕಾರ್ಯದರ್ಶಿ ಸುರೇಶ್‌ ಶೆಟ್ಟಿ, ವಿವಿಧ ಸಮಿತಿ ಪದಾಧಿಕಾರಿಗಳು ಮತ್ತಿತರಿದ್ದರು.

LEAVE A REPLY

Please enter your comment!
Please enter your name here