Home ಧಾರ್ಮಿಕ ಸುದ್ದಿ ಶ್ರೀ ಕಾಶೀಮಠಾಧೀಶರ ಮೊಕ್ಕಾಂ, ಭಜನ ಶತಮಾನೋತ್ಸವ

ಶ್ರೀ ಕಾಶೀಮಠಾಧೀಶರ ಮೊಕ್ಕಾಂ, ಭಜನ ಶತಮಾನೋತ್ಸವ

1799
0
SHARE

ಹೆಬ್ರಿ: ಹೆಬ್ರಿ ಶ್ರೀ ರಾಮ ಮಂಟಪ ಗೌಡ ಸಾರಸ್ವರ ಬ್ರಾಹ್ಮಣ ಸಭಾ ಇದರ ವತಿಯಿಂದ 100ನೇ ವರ್ಷದ ಏಕಾಹಭಜನೆಯ ಅಂಗವಾಗಿ ಭಜನಾ ಶತಮಾನೋತ್ಸವ ಕಾರ್ಯಕ್ರಮ ಜ.26ರಿಂದ ಜ.29ರ ವರೆಗೆ ಹೆಬ್ರಿ ರಾಮ ಮಂದಿರ ಜರಗಲಿದ್ದು ಶ್ರೀ ಕಾಶೀ ಮಠಾಧೀಶರಾದ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಮೊಕ್ಕಾಂ ನಡೆಯಲಿದೆ.

ದಿನಂಪ್ರತಿ ರಾತ್ರಿ 7 ಗಂಟೆಗೆ ನಗರ ಭಜನೆ ಹಾಗೂ ಪೂಜೆ ನಡೆಯಲಿದ್ದು ಜ. 26ರಂದು ಬೆಳಗ್ಗೆ 9ಗಂಟೆಗೆ 5 ಕಾಯಿ ಗಣಪತಿಹೋಮ, 11ಕ್ಕೆ ಭಜನ ಕಾರ್ಯಕ್ರಮ, 1 ಗಂಟೆಯಿಂದ 5 ಗಂಟೆಯ ವರೆಗೆ ಭಜನ ಕಾರ್ಯಕ್ರಮ, ಸಂಜೆ 6ಕ್ಕೆ ಕೋಟೇಶ್ವರ ಮೊಕ್ಕಾಂನಿಂದ ಶ್ರೀ ಗುರುವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, ಹತ್ತು ಸಮಸ್ತರಿಂದ ಶ್ರೀ ಗುರುವರ್ಯರ ಪಾದಪೂಜೆ, ಆಶೀರ್ವಚನ ನಡೆಯಲಿ. ಜ. 27ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಗುರುವರ್ಯರಿಂದ ಭಜನಾ ಶತಮಾನೋತ್ಸವ, ದೀಪ ಪ್ರಜ್ವಲನ ಕಾರ್ಯಕ್ರಮ ನಡೆಯಲಿದೆ. ಜ.28ರಂದು ಬೆಳಗ್ಗೆ 6.30ಕ್ಕೆ ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದಿಂದ ಹರಿಕೀರ್ತನೆಯೊಂದಿಗೆ ಏಕಾಹ ಭಜನೆ ಜ್ಯೋತಿ ತರುವುದು, ಜ.29ರಂದು ಬೆಳಗ್ಗೆ ಓಕುಳಿ, ಮಧ್ಯಾಹ್ನ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಹತ್ತು ಸಮಸ್ತರಿಂದ ಶ್ರೀ ಗುರುವರ್ಯರ ಪಾದಪೂಜೆ, ಆಶೀರ್ವಚನ, ಫಲ ಮಂತ್ರಾಕ್ಷತೆ ನಡೆಯಲಿದೆ ಎಂದು ಹೆಬ್ರಿ ರಾಮಮಂಟಪ ಗೌಡ ಸಾರಸ್ವತ ಬ್ರಾಹ್ಮಣ ಸಭಾದ ಅಧ್ಯಕ್ಷ ಎಚ್‌. ಗುಂಡುನಾಯಕ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here