ಪುಂಜಾಲಕಟ್ಟೆ : ಸುಸಂಸ್ಕೃತ ಸಮಾಜ ನಿರ್ಮಾಣದ ಪ್ರೇರಕ ಶಕ್ತಿ ತಾಯಿ. ಮಾತೃಶಕ್ತಿ ಮನಸ್ಸು ಮಾಡಿದರೆ ಇಡೀ ಸಮಾಜವನ್ನೇ ಬದಲಿಸಬಹುದು. ಹಿಂದೂ ಸಮಾಜದ ಎಲ್ಲ ಮಾತೆಯರು ಗೌರಿ ಸ್ವರೂಪಿಗಳಾಗಬೇಕು ಎಂದು ಆಸರೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಆಶಾಜ್ಯೋತಿ ರೈ ಹೇಳಿದರು.
ಅವರು ಬಂಟ್ವಾಳ ತಾ| ವಾಮದ ಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ನಡೆದ 35ನೇ ವರ್ಷದ ಶ್ರೀ ಗೌರಿ ಗಣೇಶೋ ತ್ಸವದ ಪ್ರಯುಕ್ತ ಜರಗಿದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಗುತ್ತು ಮಾತನಾಡಿ, ಸ್ವಾತಂತ್ರÂ ಹೋರಾಟಗಾರರಿಗೆ ದೇಶಪ್ರೇಮದ ಪ್ರೇರಣೆ ನೀಡಿದ ಗಣೇಶೋತ್ಸವ ಇಂದು ಧಾರ್ಮಿಕ ಭಾವನೆ, ಹಿಂದೂ ಸಮಾಜವನ್ನು ಜಾಗೃತಗೊಳಿಸುವ ಪರಿಣಾಮ ಭಾರತ ವಿಶ್ವಜನನಿಯಾಗಿ ಮೂಡಿಬರಲಿದೆ ಎಂದರು.
ಸಮಿತಿ ಅಧ್ಯಕ್ಷ ಸಮಿತಿ ಅಧ್ಯಕ್ಷ ಸೀತಾರಾಮ ಆಚಾರ್ಯ ಕೆರೆಕೋಡಿ, ಕಾರ್ಯದರ್ಶಿ ಕೆ. ನಾಗಾರಾಜ್ ಶೆಟ್ಟಿ, ಪದಾಧಿಕಾರಿಗಳಾದ ವೆಂಕಟೇಶ್ ಭಟ್, ಶುಭಕರ ಶೆಟ್ಟಿ, ವಿನೋದ್ ಸಾಲ್ಯಾನ್, ಪ್ರಮುಖರಾದ ಜಿ.ಕೆ. ಭಟ್, ಸುಲೋಚನಾ ಜಿ.ಕೆ. ಭಟ್, ಗೋಪಾಲ ಕೃಷ್ಣ ಚೌಟ, ಮೋಹನದಾಸ ಗಟ್ಟಿ, ಕಮಲ್ ಶೆಟ್ಟಿ ಬೊಳ್ಳಾಜೆ, ಯಶಸ್ ರೈ, ರೂಪೇಶ್ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮೇಶ್ ಶೆಟ್ಟಿ ವಾಮದಪದವು ಮತ್ತಿತರರಿದ್ದರು. ಸೇವಂತಿ ಸ್ವಾಗತಿಸಿ, ನಿರೂಪಿಸಿದರು. ರೇಣುಕಾ ರೈ ವಂದಿಸಿದರು.