ಉಡುಪಿ: ಮೂಡುತೋನ್ಸೆ ಎಡಬೆಟ್ಟು ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ದೇವಸ್ಥಾನ ಮತ್ತು ಕಾಳಮ್ಮ, ಕಲ್ಕುಡ, ಕಲ್ಲುಟ್ಟಿ ದೈವಸ್ಥಾನ ಇದರ ದಶಮಾನೋತ್ಸವ, ವಾರ್ಷಿಕ ನೇಮ ನೆಂಪು ಶ್ರೀಧರ ಭಟ್ರ ನೇತೃತ್ವದಲ್ಲಿ ಫೆ. 3ರಂದು ಜರಗಲಿದೆ. ಬೆಳಗ್ಗೆ 7ಗಂಟೆಗೆ ಧ್ವಜಾರೋಹಣ, ಪ್ರಾರ್ಥನೆ, ಗಣಪತಿಹೋಮ, ಕಲಶಸ್ಥಾಪನೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ದೈವದ ಚಪ್ಪರಾರೋಹಣ 10.30 ಗಂಟೆಗೆ ದರ್ಶನ ಸೇವೆ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಗಂಟೆಗೆ ದೈವದ ಬಾಲು ಭಂಡಾರ ಚಪ್ಪರ ಪ್ರವೇಶ ರಾತ್ರಿ 9ಗಂಟೆಗೆ ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಆಶೀರ್ವಚಿಸಲಿದ್ದಾರೆ. ರಾತ್ರಿ ಕಾಳಮ್ಮ, ಕಲ್ಕುಡ, ಕಲ್ಲುಟ್ಟಿ ದೈವಗಳ ನೇಮ ಜರಗಲಿದೆ ಎಂದು ಧರ್ಮದರ್ಶಿ ರವಿ ಕೆ.ಶಾಂತಿ ತಿಳಿಸಿದರು .